ದೆಹಲಿಯಲ್ಲಿ ನಡಯುತ್ತಿರುವ ರೈತ ಹೋರಾಟ ಬೆಂಬಲಿಸಿ ಕರಾಳ ಆಚರಣೆ

ಬಳ್ಳಾರಿ ಮೇ 26 : ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಮೇ -26 ಕರಾಳ ದಿನವನ್ನು ಬೆಂಬಲಿಸಿ AIMSS ವತಿಯಿಂದ ಇಂದು ಆನ್ ಲೈನ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು .
ಹರಿಯಾಣ – ದೆಹಲಿ ಗಡಿಭಾಗದಲ್ಲಿ ಕುಳಿತಿರುವ ಸಾವಿರಾರು ರೈತರ ಹೋರಾಟ ಮೇ 26ಕ್ಕೆ 6ತಿಂಗಳನ್ನು ಪೂರೈಸಿದರೆ ಮೋದಿ ಸರ್ಕಾರದ ಆಡಳಿತವು ಈ ದಿನಕ್ಕೆ 7 ವರ್ಷಗಳನ್ನು ಪೂರೈಸುತ್ತಿದ
ಬಿಜೆಪಿಯ ಮೋದಿ ಸರ್ಕಾರ ಮಾಡಿದ ಕೃಷಿ ಕಾಯ್ದೆಗಳು ರೈತರನ್ನು ದುರ್ಗತಿಗೆ ತಳ್ಳುತ್ತಿದೆ ರೈತರನ್ನು ನಾಶ ಮಾಡಿ ಕೇವಲ ಕರ್ಪೋರೇಟ್ ಮನೆತನಗಳನ್ನು ಉದ್ಧಾರ ಮಾಡುವುದೇ ಮೋದಿ ಸರ್ಕಾರದ ಉದ್ದೇಶ ಈ ಕರಾಳ ಕಾಯ್ದೆಗಳು ರೈತರ ನಷ್ಟ ಅಲ್ಲದೆ ಸಾಮಾನ್ಯ ಜನರ ಜೀವನದ ಮೇಲು ಪರಿಣಾಮ ಬೀರುತ್ತದೆ.
ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರದ ಆಡಳಿತವು ಎಲ್ಲ ಸಾರ್ವಜನಿಕ ಕ್ಷೇತ್ರ ಗಳನ್ನು ಖಾಸಗಿಯವರಿಗೆ ಒಪ್ಪಿಸಿ ಜನಗಳ ಜೀವನವನ್ನು ಬೀದಿಗೆ ತಳ್ಳುತ್ತಿದೆ, ಇಂತಹ ಸಂದರ್ಭದಲ್ಲಿ ಅನ್ಯಾಯದ ವಿರುದ್ಧ ಜನಗಳು ಧ್ವನಿ ಎತ್ತುವ ಅವಶ್ಯಕತೆ ಇದೆ. ಮಹಿಳೆಯರು ಈ ಹೋರಾಟದಲ್ಲಿ ಭಾಗವಹಿಸುವುದು ಅತ್ಯವಶ್ಯ, AIMSS ಬಳ್ಳಾರಿ ಜಿಲ್ಲಾ ಸಮಿತಿ ರೈತ ಹೋರಾಟವನ್ನು ಬೆಂಬಲಿಸಿ ವಿವಿಧ ರೀತಿಯಲ್ಲಿ ಕಪ್ಪುಮಾಸ್ಕ್, ಕಪ್ಪುಬಾವುಟ ಪೊಸ್ಟರ್ಗಳನ್ನು ಹಿಡಿದು ಹೋರಾಟ ನಿರತ ರೈತರೇ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆಯೊಂದಿಗೆ ಈ ಆನ್ ಲೈನ್ ಪ್ರತಿಭಟನೆಯಲ್ಲಿ AIMSS ಸಂಘಟನಾಕರಾರು, ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಎಂದು ಸಂಘಟನೆಯ ಈಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.