ದೆಹಲಿಯಲ್ಲಿ ದಟ್ಟಮಂಜು

ನವದೆಹಲಿ, ಡಿ.೨೭- ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ಜನರು ಹೊರಗಡೆ ಹೋರಾಡಲು ಪ್ರಯಾಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್‌ಘಾಟ್, ಪಂಜಾಬಿ ಭಾಗ್ ಸೇರಿದಂತೆ, ಹಲವು ಭಾಗಗಳಲ್ಲಿ ಮಂಜು ಮುಸುಕಿರುವುದರಿಂದ ವಾಹನ ಸವಾರರು ವಾಹನಗಳನ್ನು ಓಡಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಬರದಂತೆ ಭಾರತೀಯ ಇಲಾಖೆ ಮಾಹಿತಿ ನೀಡಿದೆ.
ಜಮ್ಮು ಕಾಶ್ಮೀರ, ಲಡಾಕ್, ಗಿಲ್ಗಿಟ್ ,ಬಲ್ತಿಸ್ತಾನ್, ಮುಜಾಫರ್ ಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ಯಥೇಚ್ಛವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಉತ್ತರಪ್ರದೇಶ, ಉತ್ತರಕಾಂಡ ,ಹರ್ಯಾಣ, ಚಂಡಿಗಢ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಂಜು ಮುಸುಕಿದೆ.
ಇಂದು ಮತ್ತು ನಾಳೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರುವಂತೆ ದೆಹಲಿ ಸೇರಿದಂತೆ ಹರಿಯಾಣ ರಾಜಸ್ಥಾನ ಉತ್ತರ ಪ್ರದೇಶ ಜನರಿಗೆ ಹವಮಾನ ಇಲಾಖೆ ಸೂಚನೆ ನೀಡಿದೆ.
ಶೀತಗಾಳಿ:
ದೆಹಲಿ ಹಲವುಭಾಗಗಳಲ್ಲಿ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ಶೀತಗಾಳಿ ಜನರನ್ನು ಮತ್ತಷ್ಟು ನಡುಗುವಂತೆ ಮಾಡಿದೆ.
ದೆಹಲಿ ಅಲ್ಲದೆ ಪಂಜಾಬ್ ಹರಿಯಾಣ ,ಚಂದೀಘಡ ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಇದೇ ಪರಿಸ್ಥಿತಿ ಡಿಸೆಂಬರ್ ೨೯ ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೌರಾಷ್ಟ್ರ ಕಚ್ ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.
ದಟ್ಟಮಂಜು ಆವರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ವಾಹನಗಳು ಚಲಿಸದೆ ರಸ್ತೆಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.