
ಜಿ-೨೦ ಶೃಂಗಕ್ಕೆ ಚಾಲನೆ
ನವದೆಹಲಿಯಲ್ಲಿ ಇಂದು ನಡೆದ ಜಿ-೨೦ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ನವದೆಹಲಿ,ಸೆ.೯-ರಾಜಧಾನಿ ನವದೆಹಲಿಯಲ್ಲಿ ಜಿ-೨೦ ಶೃಂಗಸಭೆ ವಿಶ್ವನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ, ವಿಶ್ವದ ಹಿರಿಯಣ್ಣ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರ ಸಮಾಗಮವಾಗಿದೆ.
ಎಲ್ಲೆಡೆ ಜಿ-೨೦ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶಗಳ ಬಾವುಟಗಳು, ಬಟಿಂಗ್ಸ್‌ಗಳು, ಫ್ಲೆಕ್ಸ್‌ಗಳು ರಾಜಧಾನಿಯಲ್ಲಿ ರಾರಾಜಿಸುತ್ತಿವೆ. ಸಭೆಗಾಗಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಇಂದಿನಿಂದ ಆರಂಭಗೊಂಡಿರುವ ೧೮ನೇ ಜಿ-೨೦ ಶೃಂಗತಸಭೆ ಭಾರತದ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದು ವಿಶ್ವದ ನಾಯಕರು ಒಂದೆಡೆ ಸೇರಿದ್ದಾರೆ. ಎರಡು ದಿನಗಳ ಶೃಂಗಸಭೆಯಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಅಂತರ್ಗತ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.ಅತಿಥೇಯ ಭಾರತ, ಉಕ್ರೇನ್ ಯುದ್ಧ, ಹವಾಮಾನ ಮತ್ತು ಜಾಗತಿಕ ಆಡಳಿತ ಸೇರಿದಂತೆ ವಿಷಯಗಳೂ ಚರ್ಚೆಗೆ ಬರಲಿದೆ. ಇದೇ ವೇಳೆ ಭಾರತ-ಚೀನಾ ಗಡಿ ಸಮಸ್ಯೆಯೂ ಚರ್ಚೆಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದರ ಜೊತೆಗೆ ರಷ್ಯಾ-ಉಕ್ರೇನ್ ಯುದ್ಧ ಮತ್ತು ಹವಾಮಾನ-ಸಂಬಂಧಿತ ವಿಷಯಗಳಂತಹ ವಿವಾದಾತ್ಮಕ ವಿಷಯಗಳ ಬಗ್ಗೆ ಗಮನ ಸೆಳೆಯುವ ಸಾಧ್ಯತೆಗಳಿವೆ.ಆರಂಭಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ,ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಇತರ ವಿಶ್ವ ನಾಯಕರು ಸಾಮೂಹಿಕ ಭಾವಚಿತ್ರಕ್ಕೆ ಪೋಸು ನೀಡಿದ್ದಾರೆ.ಶೃಂಗಸಭೆಯಲ್ಲಿ ಜಿ-೨೦ ದೇಶಗಳ ಮುಖ್ಯಸ್ಥರಾದ ಫ್ಯೂಮಿಯೋ ಕಿಶಿಡಾ, ಜಸ್ಟಿನ್ ಟ್ರುಡೊ, ಇಮ್ಯಾನುಯೆಲ್ ಮ್ಯಾಕ್ರನ್, ಆಂಥೋನಿ ಅಲ್ಬನೀಸ್, ಓಲಾಫ್ ಸ್ಕೋಲ್ಜ್, ಯೂನ್ ಸುಕ್ ಯೆಯೋಲ್, ಸಿರಿಲ್ ರಾಮಫೊ?ಸಾ, ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತಿತರ ನಾಯಕರು ಭಾಗಿಯಾಗಿದ್ದಾರೆ.
ಯಾರೆಲ್ಲಾ ಗೈರು:
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಕ್ಷಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಮೆಕ್ಸಿಕೋ ಅಧ್ಯಕ್ಷ
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಸೇರಿದಂತೆ ಅನೇಕ ನಾಯಕರು ಗೈರು ಹಾಜರಾಗಿದ್ದಾರೆ. ಚೀನಾ ಅಧ್ಯಕ್ಷ ಕಿ ಜಿನ್ ಪಿಂಗ್ ಜಿ-೨೦ ಶೃಂಗಸಭೆಗೆ ಗೈರು ಹಾಜರಾಗುವುದಕ್ಕೆ ಯಾವುದೇ ಕಾರಣ ನೀಡಿಲ್ಲ ಅವರ ಬದಲು ಪ್ರಧಾನಿ ಪ್ರೀಮಿಯರ್ ಲಿ ಕಿಯಾಂಗ್ ಕಳುಹಿಸಿಕೊಟ್ಟಿದ್ದಾರೆ.
ಎಚ್ಚರಿಕೆ ಜಿ-೨೦ ಶೃಂಗಸಭೆಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಬೇಡ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಈಗಾಗಲೇ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ,ಈ ಹಿನ್ನೆಲೆಯಲ್ಲಿ ಜಾಗತಿಕ ನಾಯಕರು ಭಿನ್ನಾಭಿಪ್ರಾಯ, ಸಂಘರ್ಷವನ್ನು ಉಂಟುಮಾಡುವ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿ ಮಾಡುವ ವಿಷಯಗಳ ಚರ್ಚೆಗೆ ಕೈಹಾಕುವುದ ಕಡಿಮೆ ಎನ್ನಲಾಗಿದೆ.ನಿರಾಕರಿಸಿದ ಭಾರತದ ಉನ್ನತ ಜಿ-೨೦ ಅಧಿಕಾರಿಗಳು ಎರಡು ದಿನಗಳ ಶೃಂಗಸಭೆಯ ಮುನ್ನಾದಿನದಂದು ಸುದ್ದಿಗೋಷ್ಠಿಯಲ್ಲಿ ಘೋಷಣೆ “ಬಹುತೇಕ ಸಿದ್ಧವಾಗಿದೆ” ಒಮ್ಮತದ ಮೂಲಕ ಜಂಟಿ ಸಂವಹನವನ್ನು ಪಡೆದುಕೊಳ್ಳುವ ಭರವಸೆಯನ್ನು ಹೊಂದಿದ್ದರು.
ದಿನಪೂರ ಚರ್ಚೆ
ಶೃಂಗಸಭೆ ನಡೆಯುವ ಸ್ಥಳವಾದ ಭಾರತ್ ಮಂಟಪದಲ್ಲಿ ಜಿ-೨೦ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಈಗಾಗಲೇ ಅಂತಿಮಗೊಳಿಸಿರುವ ವಿಷಯಗಳ ಬಗ್ಗೆ ದಿನಪೂರ ಚರ್ಚೆ ನಡೆಸಲಿದ್ದಾರೆ.ಒಂದು ಭೂಮಿ ಎಂದು ಹೆಸರಿಸಿರುವ ಮಂಟಪದಲ್ಲಿ ಮಧ್ಯಾಹ್ನದ ನಂತರ ವಿವಿಧ ದ್ವಿಪಕ್ಷೀಯ ಸಭೆಗಳು ನಡೆಯಲಿವೆ.ಮತ್ತೊಮ್ಮೆ ಎರಡನೇ ಅಧಿವೇಶನ ನಡೆಯಲಿದ್ದು ಅದು ಮುಗಿದ ಬಳಿಕ ತಮ್ಮ ತಮ್ಮ ಹೋಟೆಲ್‌ಗೆ ತೆರಳಲಿದ್ಧಾರೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜೆ ೭ ರಿಂದ ರಾತ್ರಿ ೮ಕ್ಕೆ ಆಯೋಜಿಸಿರುವ ಔತಣ ಕೂಟದಲ್ಲಿ ನಾಯಕರು ಭಾಗಿಯಾಗಿಯಾಗಲಿದ್ದಾರೆ. ಈ ವೇಳೆ ಔಪಚಾರಿಕ ಮಾತುಕತೆ ನಡೆಯಲಿದೆ
ರಾಜ್ ಘಾಟ್‌ನಿಂದ ಆರಂಭ
ನಾಳೆ ಎರಡನೇ ದಿನದ ಶೃಂಗಸಭೆ ಬೆಳಗ್ಗೆ ವಿವಿಧ ನಾಯಕರು ರಾಘ್‌ಘಾಟ್‌ಗೆ ತೆರಳುವುದರಿಂದ ಕಾರ್ಯಕ್ರಮ ಆರಂಭವಾಗಲಿದ್ದು ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನ ಒಳಗೆ ಶಾಂತಿ ಗೋಡೆಗೆ ಸಹಿ ಹಾಕಲಿದ್ದಾರೆ.
ಮಹಾತ್ಮಾ ಗಾಂಧಿಯವರ ಸಮಾಧಿಗೆ ಮಾಲಾರ್ಪಣೆ ಮಾಡಲು ವಿಶ್ವ ನಾಯಕರು ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ನೇರ ಪ್ರದರ್ಶನದ ನಂತರ. ತರುವಾಯ, ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಭಾರತ್ ಮಂಟಪದ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ದಿನದ ಕೊನೆಯಲ್ಲಿ ದೆಹಲಿ ಘೋಷಣೆ ಅಂಗೀಕಾರ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.