ದೆಹಲಿಯಲ್ಲಿ ಕಳ್ಳತನವಾಗಿದ್ದ ಕಾರು ಚನ್ನಪಟ್ಟಣದಲ್ಲಿ ಪತ್ತೆ

ಬೆಂಗಳೂರು, ನ.11-ದೆಹಲಿಯ ಕಿಶಾನ್ ನಗರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಮಾರುತಿ ಸುಜುಕಿ ಬ್ರೀಜಾ ಕಾರು‌ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರುವಿನ‌ಲ್ಲಿ ಪತ್ತೆಯಾಗಿದೆ.
ದೊಡ್ಡಮಳೂರುವಿನ ಕಲ್ಯಾಣಿ ಮೋಟಾರ್ ಷೋರೂಂ ನಲ್ಲಿ ಸರ್ವೀಸ್ ಗೆ ಬಂದಾಗ ದೆಹಲಿ ಪೋಲೀಸರು ಪತ್ತೆಹಚ್ಚಿ ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ದೆಹಲಿ ಪೋಲೀಸರ ಮಾಹಿತಿ ಮೇರೆಗೆ ಗ್ರಾಮಾಂತರ ಪೋಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಮಳವಳ್ಳಿ ಮೂಲದ ಜೋಧರಾಮ್ ಬಿನ್ ಮಂಜರಾಮ್ ಹಾಗೂ ಚನ್ನಪಟ್ಟಣ ನಗರದ ಮಥೀನ್ ಖಾನ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ.
ಕಾರಿನ ನೋಂದಣಿ ಸಂಖ್ಯೆಯನ್ನು ಯುಪಿ 31 ಬಿಎಫ್ 0051 ಎಂಬ ನಕಲಿ ನೋಂದಣಿ ನಂಬರ್ ಪ್ಲೇಟ್ ಬದಲಿಸಿ ಆರೋಪಿಗಳು ಚಲಾಯಿಸುತ್ತಿದ್ದು ಚಾರ್ಸಿ ಮತ್ತು ಇಂಜಿನ್ ನಂಬರ್ ದೆಹಲಿ ನೋಂದಣಿ ಕಾರಿಗೆ ಹೊಂದಾಣಿಕೆಯಾಗಿದೆ ಎಂದು ಪ್ರಥಮ ತನಿಖಾ ವರದಿಯಲ್ಲಿ ಗ್ರಾಮಾಂತರ ಪೋಲೀಸರು ಉಲ್ಲೇಖಿಸಿದ್ದಾರೆ.