ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೨೬: ದೆಹಲಿಯ ಸಿ.ಸಿ.ಆರ್.ಟಿ(ಅಇಓಖಿಇಖ ಈಔಖ ಅUಐಖಿUಖಂಐ ಖಇSಔUಖಅಇS ಂಓಆ ಖಿಖಂIಓIಓಉ) ಕೇಂದ್ರದಲ್ಲಿ ನಡೆಯುತ್ತಿರುವ ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷಾ ಸಾಹಿತ್ಯ, ನಾಡಿನ ಇತಿಹಾಸ ಮತ್ತು ಪರಂಪರೆ, ಆಹಾರ ಪದ್ಧತಿ, ನೃತ್ಯ ಪ್ರಕಾರಗಳು ಕುರಿತ ವಿಚಾರ ಸಂಕಿರಣ ತರಬೇತಿಯಲ್ಲಿ ಚಿತ್ರದುರ್ಗ ಡಯಟ್ ವತಿಯಿಂದ ಶಿಕ್ಷಕರಾದ ಮಾರುತಿ, ಪ್ರಸನ್ನಕುಮಾರ್, ಶ್ರೀನಿವಾಸ್, ಶೋಭಾ ಮತ್ತು ಉಷಾ ಇವರು ಭಾಗವಹಿಸಿ ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮತ್ತು ಜಿಲ್ಲಾ ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್ ಮಾರ್ಗದರ್ಶನದಲ್ಲಿ ಕುವೆಂಪು ರಚಿಸಿರುವ ಬಾರಿಸು ಕನ್ನಡ ಡಿಂಡಿಮವ ಗೀತೆಗೆ ನೃತ್ಯ ಪ್ರಸ್ತುತಪಡಿಸಿದ್ದಾರೆ. ಕನ್ನಡ ನಾಡಿನ ವೈವಿಧ್ಯತೆ, ಸಂಸ್ಕೃತಿ ಕುರಿತು ಪ್ರಸ್ತುತ ಪಡಿಸಿದ ಶಿಕ್ಷಕರನ್ನು ಡಯಟ್‌ನ ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.