ದೆಹಲಿಯಲ್ಲಿ ಆಲಿಕಲ್ಲು ಮಳೆ

ನವದೆಹಲಿ, ಜ. ೬- ರಾಜಧಾನಿ ದೆಹಲಿಯ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ. ಮೈಕೊರೆಯುವ ಚಳಿಯ ನಡುವೆಯೂ ಆಲಿಕಲ್ಲು ಮಳೆಯಾಗಿರುವುದು ಜನರನ್ನು ಇನ್ನಷ್ಟು ಹೈರಾಣವಾಗಿಸಿದೆ.
ದೆಹಲಿಯ ಇನ್ನೂ ಹಲವೆಡೆ ಇಂದು ಸಹ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಇದುವರೆಗೆ ೧.೩ ಮಿ. ಮೀಟರ್ ಮಳೆಯಾಗಿದೆ. ಪಾಲಂ, ಲೋಧಿ ಮತ್ತು ರಿಡ್ಜ ರಸ್ತೆಯಲ್ಲಿ ಕ್ರಮವಾಗಿ ೫.೩ ಮಿ. ಮೀಟರ್, ೦.೪ಮಿ. ಮೀಟರ್ ಮತ್ತು ೪.೮ ಮಿ.ಮೀಟರ್ ಮಳೆಯಾಗಿದೆ.
ದೆಹಲಿಯಲ್ಲಿ ಕನಿಷ್ಠ ತಾಪಮಾನ ೧೩.೨ ಡಿಗ್ರಿ ಸೆಲ್ಸಿಯಸ್ಸ್‌ಗೆ ಏರಿಕೆಯಾಗಿದ್ದು ಗರಿಷ್ಠ ತಾಪಮಾನ ೨೦.೮ ಡಿಗ್ರಿ ಸೆಲ್ಸಿಯಸ್ಸ್‌ಗೆ ತಲುಪಿದೆ.