ದೆಹಲಿಯಲ್ಲಿನ ರೈತರ ಪ್ರತಿಭಟನೆಗೆ ಬೆಂಬಲ

ಬಳ್ಳಾರಿ, ಜ.02: ರೈತ – ಕೃಷಿಕಾರ್ಮಿಕ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿಯಿಂದ ದೆಹಲಿಯಲ್ಲಿನ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕುರುಗೋಡು ತಾಲೂಕಿನ ಕೋಳೂರು, ಮದಿರೆ , ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ, ಕೊರ್ಲಗುಂದಿ, ಮತ್ತಿತರ ಗ್ರಾಮಗಳಲ್ಲಿ ಪ್ರತಿಜ್ಞಾ ದಿನ ಆಚರಿಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿರಿ. ಕಾರ್ಪೋರೇಟ್ ಮಾಲೀಕರ ಪರವಾದ ಕಾನೂನನ್ನು ರದ್ದು ಮಾಡಿ. ಅಂಬಾನಿ-ಅದಾನಿಗಳ ಏಜೆಂಟ್ ಮೋದಿ ಸರ್ಕಾರಕ್ಕೆ ಧಿಕ್ಕಾರ. ಕೇಂದ್ರ ಸರ್ಕಾರದ ಹಠಮಾರಿ ಧೋರಣೆಗೆ ಧಿಕ್ಕಾರ!’ ಮುಂತಾದ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಸಂಪೂರ್ಣ ವಾಪಸ್ ತೆಗೆದುಕೊಳ್ಳುವವರೆಗೂ ಹೋರಾಟವನ್ನು ತೀವ್ರಗೊಳಿಸುವುದಾಗಿ ನೆರೆದಿದ್ದ ರೈತರು ಪ್ರತಿಜ್ಞೆಯನ್ನು ತೆಗೆದುಕೊಂಡರು.
ಈ ಸಂದರ್ಭದಲ್ಲಿ ಎಸ್ ಯು ಸಿಐ ಜಿಲ್ಲಾ ಸಮಿತಿ ಸದಸ್ಯ ಸೋಮಶೇಖರ್ ಗೌಡ ಮಾತನಾಡುತ್ತಾ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಕೇವಲ ಪಂಜಾಬ್-ಹರಿಯಾಣದ ರೈತರದÀಷ್ಟೆ ಅಲ್ಲದೆ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ್ ಮುಂತಾದ ರಾಜ್ಯಗಳಿಂದಲ್ಲದೆ, ದಕ್ಷಿಣ ಭಾರತದ ರಾಜ್ಯಗಳಿಂದಲೂ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ದಿನಂದಿನಕ್ಕೆ ರೈತರ ಸಂಖ್ಯೆ ಏರುತ್ತಲೇ ಇದ್ದು, 2 ಕೋಟಿಯನ್ನೂ ದಾಟಿದೆ. ಭಾರತದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಹೋರಾಟವಾಗಿದೆ ಎಂದರು.
ದೇಶದ ಪ್ರಜ್ಞಾವಂತ ಜನತೆ ಕೇಂದ್ರ ಬಿಜೆಪಿ ಸರ್ಕಾರದ ಕುತಂತ್ರಗಳನ್ನು ಸೋಲಿಸಿ, ರೈತರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟವನ್ನು ತೀವ್ರಗೊಳಿಸಬೇಕಿದೆ. ಒಗ್ಗಟ್ಟಿನ ಹೋರಾಟದ ಮೂಲಕ ಮಾತ್ರವೆ ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿಗಳನ್ನು ಸೋಲಿಸಲು ಸಾಧ್ಯ.. ಈ ಫ್ಯಾಸಿಸ್ಟ್ ಸರ್ಕಾರಕ್ಕೆ ಮಣ್ಣುಮುಕ್ಕಿಸಲು ಎಲ್ಲಾ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗೋಣ ಮತ್ತು ಈ ಹೋರಾಟವನ್ನು ಮುಂದುವರೆಸುವುದಲ್ಲದೇ ಮತ್ತಷ್ಟು ತೀವ್ರಗೊಳಿಸುತ್ತೇವೆಂದು ರೈತರೊಂದಿಗೆ ಪ್ರತಿಜ್ಞೆ ಮಾಡಿದರು.ಈ ಸಂದರ್ಭದಲ್ಲಿ ಆರ್.ಕೆ.ಎಸ್ ಜಿಲ್ಲಾ ಕಾರ್ಯದರ್ಶಿ ಈ.ಹನುಮಂತಪ್ಪ, ಜಿಲ್ಲಾ ಮುಖಂಡರು ಗೋವಿಂದ್ ಪಂಪಾಪತಿ, ಬಸಣ್ಣ, ಅಂಜಿನೇಯ ಹಾಗೂ ಇನ್ನಿತರ ರೈತರು ಭಾಗವಹಿಸಿದ್ದರು.