
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.24: ಅಜ್ಮೀರ ದರ್ಗಾ ದರ್ಶನ ಬಳಿಕ ಸಚಿವ ಸ್ಥಾನದ ಲಾಬಿಗಾಗಿ ಗ್ರಾಮೀಣ ಶಾಸಕ ನಾಗೇಂದ್ರ ದೆಹಲಿಗೆ ತೆರಳಿದ್ದಾರೆ.
ಗೆಲುವಿನ ಹರಕೆ ತೀರಿಸಲು ಶಾಸಕ ನಾಗೇಂದ್ರ ರಾಜಸ್ಥಾನದ ಅಜ್ಮೀರ ಸೂಫಿ ಸಂತ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ನಿನ್ನೆ ಭೇಟಿ ನೀಡಿ.ಪುಷ್ಪ ಚಾದರ್ ಅರ್ಪಿಸಿದ್ದಾರೆ.
ಬಳ್ಳಾರಿ ಗ್ರಾಮಿಣ ಕ್ಷೇತ್ರ ಶ್ರೀರಾಮುಲು ತವರೂರಲ್ಲಿ ಸೋಲಿಸೋದು ಅಷ್ಟು ಸುಲಭವಾಗಿರಲಿಲ್ಲ. ಅಲ್ಪ ಸಂಖ್ಯಾತರು ನಿರ್ಣಾಯಕ ರಾಗಿರೋ ಕ್ಷೇತ್ರವಿದ್ರೂ ಇಲ್ಲಿ ಶ್ರೀರಾಮುಲು ಹೆಸರು ಒಂದು ಬ್ರಾಂಡ್ ಅಗಿತ್ತು.
ಈವರೆಗೆ ಇಲ್ಲಿ ಸೋಲದ ಶ್ರೀರಾಮುಲುಗೆ ಇದೀಗ ಅಲ್ಪ ಸಂಖ್ಯಾತರ ಹೆಚ್ಚಿನ ಬೆಂಬಲದ ಮೂಲಕ ಸೋಲಿನ ರುಚಿ ತೋರಿಸಿದ್ದಾರೆ ನಾಗೇಂದ್ರ.
ಗೆಲುವಿನ ಹಿನ್ನೆಲೆ ಅಲ್ಪ ಸಂಖ್ಯಾತರ ದೈವವಾಗಿರೋ ಅಜ್ಮೀರ ದರ್ಗಾಕ್ಕೆ ಆಂಧ್ರ ಸಚಿವ ಸಹೋದರ ಗುಮ್ಮನೂರು ಜಯರಾಂ ಜೊತೆ ಭೇಟಿ ನೀಡಿ ಹರಕೆ ತೀರಿದ್ದಾರೆ.