ದೆಹಲಿಗೆ ತಕ್ಷಣ 490 ಟನ್‌‌‌ ಆಕ್ಸಿಜನ್ ಪೂರೈಸಿ:ಕೇಂದ್ರಕ್ಕೆ ಕೋರ್ಟ್ ಖಡಕ್ ಎಚ್ಚರಿಕೆ

ನವದೆಹಲಿ, ಮೇ 1- ದೆಹಲಿಗೆ ತಕ್ಷಣ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆ ಎದುರಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಇಂದು ಖಡಕ್ ಎಚ್ಚರಿಕೆ ನೀಡಿದೆ.

ಆಕ್ಸಿಜನ್ ಪೂರೈಕೆಯ ಕೊರತೆಯುಂಟಾಗಿ ಬಾತ್ರಾ ಆಸ್ಪತ್ರೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರದವರೆಗೆ ಅಥವಾ ಅರ್ಧ ಘಂಟೆಯವರೆಗೆ ಆದೇಶವನ್ನು ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನು ನಿರಾಕರಿಸಿದೆ.

ದೆಹಲಿಯಲ್ಲಿ ಸಾಯುತ್ತಿರುವ ಜನರನ್ನು ನಾವು ಕಣ್ಣುಮುಚ್ಚಿ ನೋಡುತ್ತಿರುತ್ತೇವೆ ಎಂದು ನೀವು ಭಾವಿಸಿದ್ದೀರಾ ಕೋರ್ಟ್ ಪ್ತಶ್ನಿಸಿದೆ.

ದೆಹಲಿಗೆ ಕೇಂದ್ರವು 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ ಮತ್ತು ನೀವು ಅದನ್ನು ಪೂರೈಸಬೇಕು ಎಂದು ನ್ಯಾಯಪೀಠ ಹೇಳಿದೆ.