ದೃಷ್ಠಿ ಫೌಂಡೇಶನ್ ವತಿಯಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ವಿಜಯಪುರ, ಜು.19-ದೃಷ್ಠಿ ಪೌಂಡೇಶನ್ ಹಾಗೂ ಸಂಸ್ಕøತ ಇಲಾಖೆ ಭಾರತ ಸರಕಾರ ಇವರ ಸಹಯೋಗದೊಂದಿಗೆ ದೃಷ್ಠಿ ಉತ್ಸವ-2022ರ ಕಾರ್ಯಕ್ರಮವು ವಿಜಯಪುರ ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವಿರಾದ ಪಂಡಿ ಎಮ್. ವೆಂಕಟೇಶಕುಮಾರ, ಅದ್ಯಕ್ಷರಾದ ಪಿ.ಬಿ. ಕುಲಕರ್ಣೀ, ಡಾ. ಬದ್ರಿನಾಥ ಅಥನಿ, ಮೀನಾ ಬಿ. ಅಥಣಿ, ಹಾಗೂ ಬಾಪುಗೌಡ, ಶ್ರೀಮತಿ ಬಂಧರವಾಡ ಇವರುಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪಂಡಿತ ವೆಂಕಟೇಶಕುಮಾರ ಇವರೊಂದಿಗೆ ತಬಲಾ ವಾದಕರಾದ ಕೇಶವ ಜೋಶಿ, ಬೆಂಗಳೂರು ಹಾಗೂ ಹಾರ್ಮೋನಿಯಮ್ ವಾದಕರಾದ ಗುರುಪ್ರಸಾದ ಹೆಗಡೆ, ಧಾರವಾಡ ಇವರೊಂದಿಗೆ ಹಅಪರೂಪ ರಾಗಗಲು, ಭಜನ, ವಚನ ಸಾಹಿತ್ಯ , ಅಬಂಗ್, ದಾಸರಪದ, ಕೊನೆಯದಾದ ಒಂದು ಬಾರ ಸ್ಮರಣೆ ಸಾಲದ ಗಾಯವನ್ನು ಅತ್ಯಂತ ರಾಗವಾಗಿ ಹಾಡುವುದರ ಮೂಲಕ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿಕೊಂಡರು.

ಕೊನೆಯಲ್ಲಿ ಶ್ರೀಮತಿ ಮೀನಾ ಬಿ. ಅಥಣ ಆಗಮಿಸಿದ ಕಲಾವಿದರಿಗೆ ಹಾಗೂ ಸಂಗೀತಾಭಿಮಾನಿಗಳಿಗೆ ಹಾಗೂ ಪದಾಧಿಕಾರಿಗಳಿಗೆ ವಂದನದ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಅಧಿಕ ಪ್ರೇಕ್ಷಕರು ಭಾಗವಹಿಸಿ ಸಂಗೀತ ಸಂಜೆಯ ರಸದೌತಣ ಪಡೆದುಕೊಂಡರು.