ದೃಷ್ಟಿದಾನ ಮೂಲಕ ೪ ಕುಟುಂಬಕ್ಕೆ ಹೊಸಬೆಳಕು ನೀಡಿದ ಜಗದೀಶ್

ರಾಯಚೂರು,ಏ.೧೬- ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದ ಜಗದೀಶ್ ಕುಮಾರ್ ಡೊಣಿ ಮಹಿಂದ್ರಾ ಕಂಪನಿಯ ಉದ್ಯೋಗಿ ದೃಷ್ಟಿದಾನ ಮೂಲಕ ೪ಕುಟುಂಬಕ್ಕೆ ಹೊಸ ಬೆಳಕು ನೀಡಿ ಸಾವಿನಲ್ಲೂ ಸಾರ್ಥಕತೆ ಕಂಡರು.
ತೀವ್ರ ದುಃಖದಲ್ಲಿದ್ದರೂ ಜಗದೀಶ್ ಕುಮಾರ್ ಅವರ ತಂದೆ ಶಿವಾಜಿರಾವ್ ಡೋಣಿ ಪೋಲಿಸ್ ಇಲಾಖೆ, ಅವರ ತಾಯಿ ಸರೋಜಾ ಡೋಣಿ, ಅವರ ಧರ್ಮಪತ್ನಿ ಆಶಾ ಡೊಣಿ ನೇತ್ರದಾನಕ್ಕೆ ಒಪ್ಪಿಗೆ ನೀಡಿದ ಆದರ್ಶಪ್ರಾಯರಾದರು.
ನೇತ್ರದಾನಕ್ಕೆ ಪ್ರೇರಣೆ – ಮಾರ್ಗದರ್ಶನ ಪ್ರೇರಣೆ ನೀಡಿದ ರಾಷ್ಟ್ರೀಯ ದೇಹಾಂಗದಾನ ಸಮಿತಿಯ ಜಿಲ್ಲಾದ್ಯಕ್ಷರು ಮಾತನಾಡಿ ಪರೋಪಕಾರಾರ್ಥ೦ ಇದಂ ಶರೀರo ಎಂಬದು ತಿಳಿಸಿ. ದಾನ ಎಂಬುದು ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಕಾರ್ಯ ಎಂದರು.
ನವೋದಯ ಮೆಡಿಕಲ್ ಕಾಲೇಜಿನ ನೇತ್ರ ವಿಭಾಗ ಮುಖ್ಯಸ್ಥರಾದ ಡಾ. ಅನುಪಮ ವಾಲ್ವೇಕರ್ ಹಾಗೂ ಡಾ. ತೆಜಸ್ವಿ, ಡಾ ಭಾಗ್ಯಶ್ರಿ, ಡಾ ಜಬಾ, ಡಾ ಮೇಘನಾ ಹಾಗೂ ವೈದ್ಯರ ತಂಡ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಲೇಒಟ್ ಬಡಾವಣೆ ನಿವಾಸಿಗಳು, ಕ್ಷತ್ರಿಯ ಮರಾಠ ಸಮಾಜದ ಗುರು ಹಿರಿಯರು, ಅವರ ಗೆಳೆಯರ ಬಳಗ ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.