ದೃಶ್ಯ ಕಲಾವಿದ ಶಿವಶಂಕರ್ ಸುತಾರ್ ಗೆ ‘ಸ್ಪೆಶಲ್ ಜ್ಯೂರಿ ಅವಾರ್ಡ್

ದಾವಣಗೆರೆ.ಜೂ.೧೧:ಬೆಂಗಳೂರಿನ ‘ಆರ್ಟ್ ಬೇರು’ಕಲಾ ಸಂಘಟನೆ ಆಯೋಜಿಸಿದ ರಾಷ್ಟ್ರಮಟ್ಟದ ಕಲಾ ಪ್ರದರ್ಶನ&ಸ್ಪರ್ಧೆಯಲ್ಲಿ ನಗರದ ದೃಶ್ಯ ಕಲಾವಿದ ಶಿವಶಂಕರ್ ಸುತಾರ್ ರವರ 18ಇಂಚು×30ಇಂಚು ಅಳತೆಯ ಮಿಶ್ರ ಮಾಧ್ಯಮದ’ಡಿವೈನ್ ಕ್ರಿಯೇಷನ್’ಶೀರ್ಷಿಕೆಯ ಕಲಾಕೃತಿಯು  ಸ್ಪೆಷಲ್ ಜ್ಯೂರಿ ಅವಾರ್ಡ್ ಗೆ ಆಯ್ಕೆ ಆಗಿದೆ.ಇಂದು ನಡೆಯಲಿರುವ ಈ ಕಲಾಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಆರ್ಟ್ ಬೇರು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಶಂಕರ್ ಸುತಾರ್ ರವರು ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಬೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.