ದೃಶ್ಯವೈಭವಕ್ಕೆ ಬೆರಗಾದ ನಟ ರಾಣ ದಗ್ಗುಬಾಟಿ

•             ಚಿ.ಗೋ ರಮೇಶ್

“ಕೆಜಿಎಫ್” ದೇಶ ವಿದೇಶಗಳಲ್ಲಿ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಇದೀಗ ಮತ್ತೊಮ್ಮೆ ಕನ್ನಡ ಬಾವುಟವನ್ನು ಹಾರಿಸುವ ಗಡಿಯಾಚೆ ಹಾರಿಸುವ ಗಳಿಗೆ ಎದುರಾಗುತ್ತಿದೆ.

ಅದುವೇ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಹಾಗು ಬಹುಭಾಷಾ ನಟಿ ಶ್ರೀಯಾ ಸರಣ್ ಅಭಿನಯದ “ಕಬ್ಜ” ಚಿತ್ರದಲ್ಲಿ ನಿರ್ದೇಶಕ ಆರ್.ಚಂದ್ರು ಕಟ್ಟಿಕೊಟ್ಟಿರುವ ದೃಶ್ಯ ವೈಭವ ಕಂಡ ತೆಲುಗು ನಟ ರಾಣ ದಗ್ಗುಬಾಟಿ ಬೆರಗಾಗಿದ್ದಾರೆ. ಅಷ್ಟೇಅಲ್ಲ ಟೀಸರ್ ಬಿಡುಗಡೆ ಮಾಡಿ, ವಾರೆ ವ್ಹಾ..ಎಂದು ಚಪ್ಪಾಳೆ ತಟ್ಟಿ ತಂಡದ ಶ್ರಮ ಕೊಂಡಾಡಿದ್ದಾರೆ.

ಕನ್ನಡ,ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಒರಿಯಾ, ಮರಾಠಿ, ಬೋಜ್‍ಪುರಿ, ಸೇರಿ 9 ಭಾಷೆ ಜೊತೆಗೆ ಚೈನಾ ಭಾಷೆಯಲ್ಲಿಯೂ ತೆರೆಗೆ ಬರುವ ನಿರೀಕ್ಷೆ ಇದೆ.

ನಟ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಿ ಉಡುಗೊರೆ ನೀಡಿದೆ ಚಿತ್ರತಂಡ, ಈ ವೇಳೆ ಉದ್ಯಮಿ ಬಿ.ಆರ್.ಶೆಟ್ಟಿ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸೇರಿ ಅನೇಕರು ಶುಭಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಚಂದ್ರು, ಸ್ಪೆಷಲ್ ಹಾಡು ಬಿಟ್ಟು ಬಹುತೇಕ ಚಿತ್ರೀಕರಣ ಮುಗಿದಿದೆ, ಭಾರತೀಯ ಚಿತ್ರರಂಗ ಕನ್ನಡ ಕಡೆ ತಿರುಗಿ ನೋಡಬೇಕು ಎನ್ನುವ ಉದ್ದೇಶವಿದೆ. ಇದುರವೆಗೆ ಮಾಡಿರುವ 11 ಚಿತ್ರಗಳು ಬೇರೆ. ಈ ಚಿತ್ರವೇ ಬೇರೆ. ಮುಂಚೆ ಎರಡು ಮೂರು ಸೀನ್ ದಿನಕ್ಕೆ ತೆಗೆದರೆ ಸಾಕು ಎಂದು ಖುಷಿ ಪಡುತ್ತಿದ್ದೆ.ಈಗ ಹಾಗಲ್ಲ ಸಾಧನೆ ಮಾಡಲೆಂದೇ ಈ ಚಿತ್ರ ನಿರ್ದೇಶನ, ನಿರ್ಮಾಣ ಮಾಡಿದ್ದೇನೆ.

ಮೇಕಿಂಗ್‍ನಲ್ಲಿ ಕಾಂಪ್ರಸೈಸ್ ಮಾಡಿಕೊಂಡಿಲ್ಲ.ಮೇಕಿಂಗ್ ನೋಡಿ ಸಿನಿಮಾ, ಶಿವಣ್ಣ ಉಪ್ಪಿ ಸಾರ್ ಹುರಿದುಂಬಿಸಿದ್ದರು. ಡೈಮಂಡ್ ತರದ ಪಾತ್ರ ಕಿಚ್ಚ ಸುದೀಪ್ ಅವರದು. ಚಿತ್ರ ಕನ್ನಡಿಗರ ಗೆಲವಾಗಬೇಕು.ನಟಿ ಶ್ರೀಯಾ ಅವರಿಗೆ ಬಾಡಿಲಾಂಗ್ವೇಜ್ ಮೂಲಕ ಕಥೆ ಹೇಳಿದ್ದೇನೆ. ಚಿತ್ರವನ್ನು ಬೆಂಗಳೂರು,ಮೈಸೂರು,ಮಂಗಳೂರು, ನಮ್ಮದೇ ತೋಟದ ಮನೆ ಸೇರಿದಂತೆ ಹಲವು ಕಡೆ ಚಿತ್ರಕರಣ ಮಾಡಲಾಗಿದೆ. ಈ ವರ್ಷಾಂತ್ಯದಲ್ಲಿ ತೆರೆಗೆ ತರುವ ಉದ್ದೇಶವಿದೆ ಎನ್ನುವ ವಿವರ ನೀಡಿದರು

ಮೇಕಿಂಗ್ ಸ್ಟೇಲ್ ಅದ್ಬುತ

“ಚಿತ್ರ ಮೂಡಿ ಬಂದಿರುವ ಪರಿ ಅಚ್ಚರಿ ಮೂಡಿಸಿದೆ. ಒಂದೊಂದು ಪ್ರೇಮ್ ಅದ್ಬುತವಾಗಿ ಮೂಡಿ ಬಂದಿದೆ. ಚಂದ್ರು ಕಥೆ ಹೇಳಿದಾಗ ಅದಿರಿ ಬಿಟ್ಟಿದ್ದೆ. ಈ ರೀತಿ ಮಾಡಲು ಸಾಧ್ಯವಾ ಅಂತ. ಮೇಕಿಂಗ್ ಮೋಡಿ ಮಾಡಿದೆ. ಅರ್ಜುನ್ ಶೆಟ್ಟಿ ಕ್ಯಾಮರಾ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕೆ ಕಳಶವಿಟ್ಟಂತೆ ಇದೆ. ಚಿತ್ರ ನೋಡಲು ಕಾತುರನಾಗಿದ್ದೇನೆ..”

– ಉಪೇಂದ್ರ, ನಟ

ಉತ್ತಮ ಪಾತ್ರ ಸಿಕ್ಕಿದೆ

ಚಂದ್ರ ಚಿತ್ರದ ಬಳಿಕ ಮರಳಿ ಕನ್ನಡಕ್ಕೆ ಬಂದಿದ್ದೇನೆ. ಕಬ್ಜದಲ್ಲಿ ಅತ್ಯುತ್ತಮ ಪಾತ್ರ ಸಿಕ್ಕಿದೆ. ನಿರ್ದೇಶಕ ಚಂದ್ರು ಅವರ ಮೇಕಿಂಗ್ ವರ್ಣನೆ ಮಾಡಲು ಆಗದು.ಕನ್ನಡ ಸಿನಿಮಾಗಳು ಗಡಿಯಾಚೆ ಗಮನ ಸೆಳೆಯುತ್ತಿರುವುದು ಖುಷಿ ವಿಚಾರ.

–              ಶ್ರೀಯಾ ಸರಣ್, ನಟಿ