ದೃಶ್ಯಭೂಷಣ ಪ್ರಶಸ್ತಿಗೆ ಆಯ್ಕೆ

ಕಲಬುರಗಿ ನ 4: ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆ ಕೊಡಮಾಡುವ ಈ ಸಾಲಿನ ದೃಶ್ಯಭೂಷಣ ಪ್ರಶಸ್ತಿಗೆ ಇಬ್ಬರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಕಳೆದ 30 ವರ್ಷಗಳಿಂದ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡ ಖ್ಯಾತ ಕಲಾವಿದರಾದ ಉಡುಪಿಯ ಎಲ್.ಎನ್ ತಲ್ಲೂರ ಮತ್ತು ಕಲಬುರಗಿಯ ಶೇಷರಾವ ಬಿರಾದಾರ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಸಂಸ್ಥೆ ಕಾರ್ಯದರ್ಶಿ ಡಾ. ವಿ.ಜಿ ಅಂದಾನಿ ತಿಳಿಸಿದ್ದಾರೆ.