ದೃಶ್ಯಕಲೆಯಲ್ಲಿ ದೇಶಿ ಸಂಸ್ಕøತಿಗೆ ಹೆಚ್ಚಿನ ಪ್ರಾಮುಖ್ಯತೆ: ಶೆಟ್ಟಿ

ಕಲಬುರಗಿ.ಅ.31: ದೃಶ್ಯಕಲೆಯಲ್ಲಿ 20ನೇ ಶತಮಾನದ ಆದಿಯಿಂದ ಪ್ರಜ್ಞಾಪೂರ್ವಕವಾಗಿ ಭಾರತೀಯ ದೇಶಿ ಸಂಸ್ಕøತಿಯ ವಸ್ತು-ವಿಷಯಗಳ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು ಕಂಡು ಬರುತ್ತದೆ. ಈ ದಿಕ್ಕಿನಲ್ಲಿ ಇಣಿಕಿ ನೋಡಿರಾದ ಖ್ಯಾತ ದೃಶ್ಯಕಲಾವಿದರಾದ ಅಮೃತ್ ಶೆರಗಿಲ್, ರಾಮಕಿಂಕರ್ ಬೈಜ್, ಬಿನೋದ್ ಬಿಹಾರಿ ಮುರ್ಖಜಿ ಹೀಗೆ ಅನೇಕ ಕಲಾವಿದರು ನೆನಪಾಗುತ್ತಾರೆ ಎಂದು ಹಿರಿಯ ಚಿತ್ರಕಲಾವಿದ ಮಲ್ಲಿಕಾರ್ಜುನ್ ಎಸ್. ಶೆಟ್ಟಿ ಅವರು ಹೇಳಿದರು.
ನಗರದ ಕಲಾಮಂಡಳದಲ್ಲಿ ಭಾನುವಾರ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ವತಿಯಿಂದ ತಿಂಗಳ ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪ್ರಬಂಧಕರಾಗಿ ಮಾತನಾಡಿದ ಅವರು, 1934ರಲ್ಲಿ ಭಾರತಕ್ಕೆ ಮರಳಿದ ಅಮೃತ್ ಶೆರಗಿಲ್ ಇಲ್ಲಿಯ ಜನಜೀವನವನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಅವರ ಕಲಾಕೃತಿಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಅದೇ ರೀತಿ ರಾಮಕಿಂಕರ್ ಬೈಜ್ ಅವರು ಶಾಂತಿನಿಕೇತನದಲ್ಲಿ ರಚಿಸಿದ ಶಿಲ್ಪಗಳು ಹಾಗೂ ಬಿನೋದ್ ಬಿಹಾರಿಯವರ ಬಿತ್ತಿಚಿತ್ರಗಳು ಭಾರತೀಯ ದೇಶಿ ಸಂಸ್ಕøತಿಯ ಘಟ್ಟಿ ಉದಾರಣೆಗಳಾಗಿ, ಭಾರತೀಯ ಆಧುನಿಕ ಕಲೆಯ ಪ್ರಾರಂಭಿಕ ಹಂತವಾಗಿ ರೂಪಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶಾಂತಿನಿಕೇತನದಲ್ಲಿ ನಂದಲಾಲ್ ಭೋಸ್‍ರ ಕಾರ್ಯ ಭಾರತೀಯತೆ ಸ್ಥಾಪನೆಯ ಪ್ರಯತ್ನಗಳಾಗಿ ಗೋಚರಿಸುತ್ತವೆ. ಭಾರತೀಯ ಆಧುನಿಕ ಕಲಾಪರಂಪರೆಯ ದಿಕ್ಕು ನಿರ್ಧಾರಗೊಳ್ಳುವ ಸಂದರ್ಭ ಇದಾಗಿತ್ತು ಎಂದರು.
ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಬಿ., ಅವರು ಅಧ್ಯಕ್ಷತೆ ವಹಿಸಿದ್ದರು. ಬಸವರಾಜ್ ರೇ. ಉಪ್ಪಿನ್, ಬಸವರಾಜ್ ಜಾನೆ, ಮಂಜುಳಾ ಜಾನೆ, ನಾರಾಯಣ್ ಬೋಸಾವಳೆ, ಶಾಂತಕುಮಾರ್ ಹತ್ತರಕ್ಕಿ, ಬಾಬುರಾವ್ ಎಚ್, ಡಾ ಅಶೋಕ್ ಶೇಟಕಾರ್, ಚಂದ್ರಹಾಸ್ ಜಾಲಿಹಾಳ್, ನಾರಾಯಣ್ ಜೋಶಿ, ಮಹೇಶ್ ತಳವಾರ್, ನಿಂಗಣ್ಣ ಕೇರಿ, ಗಿರೀಶ್ ಕೆ, ಬಿ.ವಿ. ಕಮಾಜಿ, ಅಣ್ಣಾರಾಯ್ ಹಂಗರಗಿ, ದೌಲತ್‍ರಾಯ್ ದೇಸಾಯಿ, ಸೂರ್ಯಕಾಂತ್ ನಂದೂರ್, ನೀಲಾಂಬಿಕಾ ಹಿರೇಮಠ್, ಸಿದ್ದು ಮರಗೋಳ್, ಶಿವನಂದ್ ಕೊಪ್ಪದ್, ಸಂಗಯ್ಯ ಹಳ್ಳದಮಠ್ ಮುಂತಾದವರು ಉಪಸ್ಥಿತರಿದ್ದರು. ನಯನಾ ಬಿ., ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.