ದೃಶ್ಯಕಲಾ ವಿದ್ಯಾಲಯದಲ್ಲಿ ಗಮನ ಸೆಳೆದ ಅಕ್ಷರ ಸಿಂಗಾರೋತ್ಸವ


ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೫; ಕರ್ನಾಟಕ ಲಲಿತಕಲಾ ಅಕಾಡೆಮಿ ಕನ್ನಡ ಲಿಪಿಯ ವೈಶಿಷ್ಟ್ಯ ಪೂರ್ಣ ಪ್ರಸ್ತುತಿ ಇರುವ ಲಿಪಿಗಾರಿಕೆಯನ್ನು ಪ್ರೋತ್ಸಾಹಿಸಲು ಬಯಸುತ್ತದೆ.ಇಂತಹ ಕಲಾವಿದರು ಕಲಾ ಪ್ರದರ್ಶನ ನಡೆಸಲು ,ಅವರ ಸಾಧನೆಯನ್ನು ದಾಖಲೀಕರಣ ಮಾಡಲು ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಂಬಲಿಸುತ್ತದೆ ಎಂದು ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿನ ದೃಶ್ಯ ವಿಶ್ವ ಕಲಾಗ್ಯಾಲರಿ ಯಲ್ಲಿ ದಾ ಕ ಹ ವಿ ಸ &ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆ ಇವುಗಳ ಸಹಯೋಗದಲ್ಲಿ ಏರ್ಪಟ್ಟಿರುವ ಅಕ್ಷರ ಸಿಂಗಾರೋತ್ಸವ -3 ರ ಅಕ್ಷರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಕಲಾಕೃತಿಗಳನ್ನು ವೀಕ್ಷಿಸಿ ಈ ನುಡಿಗಳನ್ನು ಆಡಿದರು.ಮುಂದುವರೆದು ಮಾತನಾಡಿದ ಅವರು ಈ ಹಿಂದೆ ನಾನು, ಚಂದ್ರನಾಥ ಆಚಾರ್ಯ, ರಮೇಶ್ ಮೊದಲಾದವರು ವೈಶಿಷ್ಟ್ಯಪೂರ್ಣವಾಗಿ ಕನ್ನಡ ಲಿಪಿ ಬರೆಯುವದನ್ನು ರೂಢಿಸಿಕೊಂಡಿದ್ದೆವು ,ಪತ್ರಿಕೆ ವಲಯದಲ್ಲಿ ಕೂಡಾ ಇದು ಒಪ್ಪಿತವಾಯಿತು.ಇದೀಗ ಸುರೇಶ್ ವಾಘ್ಮೋರೆ ಮತ್ತವರ ಸ್ನೇಹಿತರ ತಂಡ “ಅಕ್ಷರ ಸಿಂಗಾರೋತ್ಸವ “ಹೆಸರಲ್ಲಿ ಇಲ್ಲಿ ಬಗೆ ಬಗೆಯ ವಿನ್ಯಾಸ ದಲ್ಲಿ ಕನ್ನಡ ಲಿಪಿಗಳನ್ನು ಬರೆದು ಪ್ರದರ್ಶನ ಮಾಡುತ್ತಿರುವುದು ಬಹಳ ಪ್ರಶಂಸನೀಯವಾದುದು.ಇಂದು ನಮ್ಮ ನಾಡಿನಲ್ಲಿ ಒಳ್ಳೆಯ ಇಲ್ಸ್ಟ್ರೆಟರ್ಗಳು ಬಹಳ ಇದ್ದಾರೆ. ಅಂಥವು ದಾಖಲೀಕರಣ ಆಗಬೇಕು. ಅಲ್ಲದೆ, ಕಲಾವಿದ್ಯಾರ್ಥಿಗಳು ಎಲ್ಲಾ ಪ್ರಕಾರದದ ಕಲೆಗಳಿಗೂ ಮುಕ್ತವಾಗಿ ತೆರೆದುಕೊಂಡು, ಆಸಕ್ತಿ ವಹಿಸಿ ಅಭ್ಯಸಿಸಬೇಕು. ಅವಲೋಕಿಸಬೇಕು ಎಂದು ನುಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಮುರಿಗೇಂದ್ರಪ್ಪ  ಮಾತನಾಡಿ, ‘ದೃಶ್ಯ ಕಲಾ ಕಾಲೇಜು ಇತ್ತೀಚೆಗೆ ಒಳ್ಳೆಯ ಕಾರ್ಯ ಕ್ರಮ ಹಮ್ಮಿಕೊಳ್ಳುವುದರ ಮೂಲಕ ಜನತೆಗೆ ಹೆಚ್ಚು ಪರಿಚಯವಾಗುತ್ತಿದೆ.ಇಂದು ಕಲೆ,ಕಲಾಶಾಲೆ ,ಕಲಾ ಪರಿಸರ ಉಳಿಸಲು ಹೋರಾಟ ಮಾಡಬೇಕಾದ ಸಂದರ್ಭವಿದೆ.ಕಲಾಶಾಲೆಗಳಲ್ಲಿ,ದೃಶ್ಯ ಕಲಾ ಕಾಲೇಜುಗಳಲ್ಲಿ ಬೋಧಕರನ್ನ ಖಾಯಂ ನೇಮಿಸಿಕೊಳ್ಳುವುದು ಸೇರಿದಂತೆ ದೃಶ್ಯ ಕಲಾ ವಲಯದ ಸಮಸ್ಯೆ ಪರಿಹರಿಸಲು ಕರ್ನಾಟಕ ಲಲಿತ ಕಲಾ ಅಕಾಡೆಮಿ ಯೂ ಪ್ರಯತ್ನ ಮಾಡಬೇಕು. ಕಲಾವಿದ್ಯಾರ್ಥಿಗಳು ,ಕಲಾವಿದರು ತಮ್ಮ ಪ್ರತಿಭೆಯನ್ನು ಮುಕ್ತ ಮನಸ್ಸಿನಿಂದ ಬೇರೆಯವರಿಗೂ ಹಂಚಬೇಕು ಇದರಿಂದ ಕಲಾವಲಯ ಬೆಳೆಯಲು ಉಳಿಯಲು ಸಹಾಯ ಆಗುತ್ತದೆ ಎಂದರು.