
ದಾವಣಗೆರೆ.ಮಾ.೬; ಕಲಬುರ್ಗಿಯ ಎಂ.ಎಂ.ಕೆ ಕಾಲೇಜ್ ಆಪ್ ವಿಸ್ಯುವಲ್ ಆರ್ಟ್ ದ ಪ್ರಾಚಾರ್ಯ ,ರಾಜ್ಯದ ಉತ್ತಮ ದೃಶ್ಯ ಕಲಾವಿದರುಗಳಲ್ಲಿ ಒಬ್ಬರಾದ ಪ್ರೊ.ಶೇಶರಾವ್ ಬಿರಾದಾರ್ ಇವರು ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಆಗಮಿಸಿ ಚಿತ್ರ ಕಲಾ ಪ್ರಾತ್ಯಕ್ಷಿಕೆ ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿ ಕಲಾ ಸಂವಾದ ನಡೆಸಿದರು. ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ್ ವಲ್ಲೇಪುರೆ, ದಾ ವಿ ವಿ ಪ್ಯಾಷನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ ಡಾ. ಜೈರಾಜ ಚಿಕ್ಕ ಪಾಟೀಲ್, ದಾ ವಿ ವಿಯ ಕಲಾ ನಿಕಾಯ ಡೀನ್ ಡಾ.ವೆಂಕಟರಾವ್ ಪಲಾಟೆ,ದೃಶ್ಯ ಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕರುಗಳಾದ ಡಾ.ಎಂ.ಕೆ ಗಿರೀಶ್ ಕುಮಾರ್, ಡಾ.ಸಂತೋಷ ಕುಲಕರ್ಣಿ, ದತ್ತಾತ್ರೇಯ ಭಟ್ಟ, ಸುರೇಶ್ ಡಿ.ಎಚ್, ಹರೀಶ್ ಎಚ್. ಎಸ್, ಪ್ರಮೋದ ಕೆ.ವಿ, ಶಿವಶಂಕರ್ ಸುತಾರ್,ರಂಗನಾಥ್, ಮತ್ತಿತರರು ಉಪಸ್ಥಿತರಿದ್ದರು.