ದೃಶ್ಯಕಲಾ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ನೂತನ ಪ್ರಾಚಾರ್ಯರಿಗೆ ಅಭಿನಂದನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨; ನಗರದ ದೃಶ್ಯಕಲಾ ಮಹಾವಿದ್ಯಾಲಯದ 2002ನೇ ಬ್ಯಾಚಿನ ಹಳೆಯ ವಿದ್ಯಾರ್ಥಿಗಳಾದ  ಕುಮಾರ್ ವೈ,  ರಾಘವೇಂದ್ರ ನಾಯಕ,  ಪ್ರದೀಪಕುಮಾರ್ ಅಣ್ಣಿಗೇರಿ,  ರವಿ ಪೂಜಾರಿ ಸೇರಿದಂತೆ ಹಲವರು ದೃಶ್ಯಕಲಾ ಮಹಾವಿದ್ಯಾಲಯದ ನೂತನ ಪ್ರಭಾರ ಪ್ರಾಚಾರ್ಯ ಡಾ.ಜೈರಾಜ ಎಂ ಚಿಕ್ಕಪಾಟೀಲ ರವರನ್ನು ಭೇಟಿಯಾಗಿ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ   ನೂತನ ಪ್ರಾಚಾರ್ಯರು ಬಂದಂತ ಹಳೆಯ ವಿದ್ಯಾರ್ಥಿಗಳಿಗೆ ಕಾಲೇಜಿನ ಅಭಿವೃದ್ಧಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಲಹೆ ನೀಡಿದರು. ಅದೇ ರೀತಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಕಲಾಕ್ಷೇತ್ರದ ವಿವಿಧ ರೀತಿಯ ಅವರ ಅನುಭವಗಳನ್ನು ಮತ್ತು  ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು. ಡಾ.ಜೈರಾಜ ಎಂ ಚಿಕ್ಕಪಾಟೀಲ ರವರು ಆ ತಂಡದ ಪ್ರತಿಯೊಬ್ಬರಿಗೂ ಅವರು ಬರೆದ ‘ಅನ್ವಯ ಕಲೆಯ ವಿವಿಧ ಆಯಾಮಗಳು ‘ಎಂಬ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. . ಈ ಸಂದರ್ಭದಲ್ಲಿ ಸತೀಶ್ ರಿತ್ತಿ, ಸುರೇಶ್ .ಸಂತೋಷ್ ಮೂಡಿ.ರಾಕೇಶ್. ಏಳು ಕೋಟಿ. ಅರವಿಂದ್.  ಮತ್ತು ಕಾಲೇಜಿನ ಸಿಬ್ಬಂದಿ ವರ್ಗ  ಉಪಸ್ಥಿತರಿದ್ದರು.