‘ದೃಗಾಂತರ’ ಜನವರಿಯಲ್ಲಿ ದ್ವಿತೀಯ ಹಂತ

ರಂಜಿತ್ ಗೌಡ.ಕೆ, ನಿರ್ಮಾಣದ ‘ದೃಗಾಂತರ’ ಚಿತ್ರದ ಚಿತ್ರೀಕರಣ ನಗರದ ಸುತ್ತಮುತ್ತ ನೆಲಮಂಗಲ, ಮಡಿಕೇರಿ ಹಾಗೂ ಚಿತ್ರದುರ್ಗದಲ್ಲಿ ನಡೆದ ದೃಶ್ಯಗಳೊಂದಿಗೆ ಶೇ.80 ಚಿತ್ರೀಕರಣ ಪೂರ್ಣಗೊಂಡಿದೆ

2ನೇ ಹಂತದ ಚಿತ್ರೀಕರಣ ಜನವರಿಯಲ್ಲಿ ಆರಂಭಗೊಳ್ಳಲಿದೆ. ಅಂಕಿತ್ ವಿ ಹೆಗಡೆ – ನಿರ್ದೇಶನದಲ್ಲಿ ಮೂಡಿದ್ದಾರೆ.

ಕಥೆ-ಗೌತಮ್ ಮೋಹನ್ ರಾಜ್, ಹಾಡುಗಳು – ಸನಿತ್ ಕುಮಾರ್, ನಾಗಾರ್ಜುನ್ ಶರ್ಮ, ಅಂಕಿತ್ ವಿ ಹೆಗಡೆ, ಛಾಯಾಗ್ರಹಣ – ಗೋವಿಂದರಾಜನ್, ಸಂಗೀತ-ಜಿ.ಆರ್. ರಾಯನ್, ಚಿತ್ರಕ್ಕಿದೆ.

ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ತಾರಾಗಣದಲ್ಲಿ ರಂಜಿತ್ ಗೌಡ, ಚಂದನ, ನಿಖಿತಾ ಸ್ವಾಮಿ, ಶೋಭರಾಜ್, ಲಕ್ಷ್ಮೀ ಭಟ್, ನಂದೀಶ್, ಸಂದೇಶ್ ಮುಂತಾದವರಿದ್ದಾರೆ