ದೂಳು ನಿಯಂತ್ರಿಸಲು ಕೈಗಾರಿಕೆಗಳ ವಿರುದ್ದ ಹೋರಾಟ ವಿಕಲ ಚೇತನರ ಸಂಘದ ಸದಸ್ಯರ ಬೆಂಬಲ

ಕುರುಗೋಡು. ಜ 03 : ಸಮೀಪದ ಕುಡುತಿನಿ ಕೈಗಾರಿಕಾಪ್ರದೇಶದಲ್ಲಿ ಕುಡುತಿನಿ ನಾಗರಿಕರು, ಸಂಘ-ಸಂಸ್ಥೆಯ ಸದಸ್ಯರು, ಮತ್ತು ಊರಿನ ಮುಖಂಡರ ಸಂಯುಕ್ತಾಶ್ರಯದಲ್ಲಿ ದೂಳುನಿಯಂತ್ರಿಸಲು ನಡೆಸುವ ಹೋರಾಟ ರವಿವಾರ 2 ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಪ್ರತಿಭಟನಾ ದರಣಿಗೆ ಕುಡಿತಿನಿ ವಿಕಲ ಚೇತನರ ಸಂಘದ ಸದಸ್ಯರು ಧರಣಿಗೆ ಬೆಂಬಲ ಸೂಚಿಸಿ, ಕೈಗಾರಿಕೆಗಳ ಮಾಲಿಕರ ವಿರುದ್ದ ದಿಕ್ಕಾರ ಕೂಗಿದರು.
ಕುಡುತಿನಿ ಪಟ್ಟಣಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ್ ಮಾತನಾಡಿ, ಕುಡುತಿನಿ ಸೇರಿದಂತೆ ವೇಣಿವಿರಾಪುರ, ತಿಮ್ಮಲಾಪುರ ಇತರೆ ಗ್ರಾಮಗಳ ಸಾವಿರಾರು ಸಂಖ್ಯೆಯ ಜನರು ಕುಡಿತಿನಿ ಪ್ರದೇಶದಲ್ಲಿನ ಕೈಗಾರಿಕೆಗಳ ದೂಳಿಗೆ ತತ್ತಿರಿಸಿದ್ದಾರೆ. ಧೂಳು ನಿಯಂತ್ರಣಕ್ಕಾಗಿ ಕಳೆದ ತಿಂಗಳು ಧರಣಿಗೆ ನಡೆಸಿದರೂ ಯಾವ ಪ್ರಯೋಜವಾಗಿಲ್ಲ. ಜೊತೆಗೆ ಪರಿಸರ ಮಾಲಿನ್ಯ ಅಧಿಕಾರಿಗಳು ಹಾಗು ಕೈಗಾರಿಗಳ ಮಾಲಿಕರ ಧೂಳು ನಿಯಂತ್ರಿಸಲು ಕ್ರಮಕೈಗೊಂಡಿಲ್ಲ. ಜಿಲ್ಲಾಡಳಿತ ಸಹ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು. ಆದ್ದರಿಂದ ಕುಡುತಿನಿ ಪ್ರದೇಶದಲ್ಲಿ ಧೂಳ ನಿಯಂತ್ರಣ ಆಗುವವರೆಗೂ ನಾವು ಧರಣಿ ವಾಪಾಸ್ಸುಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.
ರಾತ್ರಿವೇಳೆ ಪ್ರತಿಭಟನೆಯಲ್ಲಿ ಹಲವಾರು ರೈತರು ಭಜನೆ ಮಾಡಿ ಕೈಗಾರಿಗೆ ಮಾಲಿಕರ ವಿರುದ್ದ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನಾಧರಣಿಯಲ್ಲಿ ಮುಖಂಡ ಚಂದ್ರಾಯಿದೊಡ್ಡಬಸಪ್ಪ, ಪಟ್ಟಣಪಂಚಾಯಿತಿ ಸದಸ್ಯ ವೆಂಕಟರಮಣಬಾಬು, ಲೆನಿನ್,ಕನಿಕೆರೆಪೊಂಪಾಪತಿ, ಚಂದ್ರಪ್ಪ, ಟಿ.ಪೊಂಪಾಪತಿ, ಪಲ್ಲೇದ ಪ್ರಭು, ಆರ್.ಸತ್ಯಪ್ಪ, ಸ್ಟರ್‍ಪೊಂಪಾಪತಿ ಜಂಗ್ಲಿಸಾಬ್, ಭಾವಿಶಿವಕುಮಾರ್, ಲೋಕೇಶ್, ಪ್ರತಾಪ್, ವೆಂಕಟೇಶ್, ಅಂಗವಿಕಲಸಂಘದ ಅದ್ಯಕ್ಷ ನಾಗರಾಜ್, ಉಮೇಶ್, ವೆಂಕಮ್ಮ, ಸಂಪತ್, ಸೇರಿದಂತೆ ಇತರೆ ಊರಿನ ಮುಖಂಡರು ಇದ್ದರು.