ದೂರು ಸಲ್ಲಿಸಲು ಫೇಸ್ ಬುಕ್ ವೆಬ್ ಪೇಜ್

ಕಲಬುರಗಿ,ಮೇ.31-ಈ ಕೋವಿಡ್ ನ ಈ ಕಾಲದಲ್ಲಿ ನಗರದ ಜನತೆ ತಮ್ಮ ವೈಯಕ್ತಿಕ ಸಮಸ್ಯೆಗಳು ಮತ್ತು ತಮ್ಮ ಏರಿಯಾದಲ್ಲಿ ನಡೆಯುವ ಕಾನೂನುವ ಬಾಹಿರ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಲು ಆಗುವುದಿಲ್ಲ. ಅದಕ್ಕೆಂದೇ ಪೊಲೀಸ್ ಇಲಾಖೆ ನಗರದ ಪ್ರತಿಯೊಂದು ಪೊಲೀಸ್ ಠಾಣೆಗೆ ಅದರದೇಯಾದ ಫೇಸ್ ಬುಕ್ ವೆಬ್ ಪೇಜ್ ಒಂದನ್ನು ತೆರೆದಿದ್ದು, ಇನ್ನು ಮುಂದೆ ತಮ್ಮ ಸಮಸ್ಯೆಗಳ ಬಗ್ಗೆ ಇಲ್ಲಿ ದೂರು ಸಲ್ಲಿಸಬಹುದಾಗಿದೆ.
ನಗರ ಜನತೆ ತಮ್ಮ ವೈಯಕ್ತಿಕ ಸಮಸ್ಯೆಗಳು ಮತ್ತು ತಮ್ಮ ಏರಿಯಾದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಕ್ಷಣ ತಾವು ಇರುವ ಸ್ಥಳದಿಂದ ಹಾಗೂ ಮನೆಯಿಂದಲೇ ಮಾಹಿತಿ ನೀಡಲು ನಗರ ಪೊಲೀಸ್ ಇಲಾಖೆ ವತಿಯಿಂದ ಪ್ರತಿಯೊಂದು ಠಾಣೆಗೆ ಅವರದೇ ಆದ ಫೇಸ್ ಬುಕ್ ವೆಬ್ ಪೇಜ್ ತೆರೆಯಲಾಗಿದೆ. ಸಾರ್ವಜನಿಕರು ಈ ಫೇಸ್ ಬುಕ್ ವೆಬ್ ಪೇಜ್ ಗೆ ತಮ್ಮ ದೂರು ಮತ್ತು ಸಮಸ್ಯೆಗಳನ್ನು ತಿಳಿಸಬಹುದಾಗಿದ್ದು, ಇದಲ್ಲದೆ ವ್ಯಾಟ್ಸಪ್ ನಲ್ಲಿಯೂ ದೂರು ಸಲ್ಲಿಸಬಹುದಾಗಿದ್ದು, ನಗರದ ಎಲ್ಲಾ ಪೊಲೀಸ್ ಠಾಣೆಗಳ ಫೇಸ್ ಬುಕ್ ವೆಬ್ ಪೇಜ್ ಮತ್ತು ವ್ಯಾಟ್ಸಪ್ ನಂಬರ್ ಗಳ ಮಾಹಿತಿ ಈ ಕೆಳಗಿನಂತಿದೆ.
ಸ್ಟೇಷನ್ ಬಜಾರ್ ಪೊಲೀಸ್ ಸ್ಟೇಷನ್ ನ ಫೇಸ್ ಬುಕ್ ವೆಬ್ ಪೇಜ್ “ಸ್ಟೇಷನ್ ಬಜಾರ್ ಪೊಲೀಸ್ ಸ್ಟೇಷನ್ ಕಲಬುರಗಿ ಎಂದಾಗಿದ್ದು, 9480803546 ವ್ಯಾಟ್ಸಪ್ ನಂಬರ್ ಗೂ ದೂರು ಸಲ್ಲಿಸಬಹುದಾಗಿದೆ. ಅದೇ ರೀತಿ ಅಶೋಕ ನಗರ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ “ಅಶೋಕ ನಗರ ಪೊಲೀಸ್ ಸ್ಟೇಷನ್ ಕಲಬುರಗಿ”, ವ್ಯಾಟ್ಸಪ್ ನಂಬರ್ 9480803545, ಬ್ರಹ್ಮಪುರ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ “ಬ್ರಹ್ಮಪುರ ಪೊಲೀಸ್ ಸ್ಟೇಷನ್”, ವ್ಯಾಟ್ಸಪ್ ನಂಬರ್ 9480803547, ಆರ್.ಜಿ.ನಗರ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಆರ್.ಜಿ.ನಗರ ಪೊಲೀಸ್ ಸ್ಟೇಷನ್ ಕಲಬುರಗಿ”, ವ್ಯಾಟ್ಸಪ್ ನಂಬರ್ 9480803548, ಚೌಕ್ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಚೌಕ್ ಪೊಲೀಸ್ ಸ್ಟೇಷನ್ ಕಲಬುರಗಿ” ವ್ಯಾಟ್ಸಪ್ ನಂಬರ್ 9480803549, ಎಂ.ಬಿ.ನಗರ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಎಂ.ಬಿ.ನಗರ ಪೊಲೀಸ್ ಸ್ಟೇಷನ್”, ವ್ಯಾಟ್ಸಪ್ ನಂಬರ್ 9480803551, ರೋಜಾ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ರೋಜಾ ಪೊಲೀಸ್ ಸ್ಟೇಷನ್ ಕಲಬುರಗಿ” ವ್ಯಾಟ್ಸಪ್ ನಂಬರ್ 9480803550, ಗ್ರಾಮೀಣ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಗ್ರಾಮೀಣ ಪೊಲೀಸ್ ಸ್ಟೇಷನ್ ಕಲಬುರಗಿ ಸಿಟಿ” ವ್ಯಾಟ್ಸಪ್ ನಂಬರ್ 9480803553, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಯುನಿವರ್ಸಿಟಿ ಪೊಲೀಸ್ ಸ್ಟೇಷನ್ ಕಲಬುರಗಿ ಸಿಟಿ” ವ್ಯಾಟ್ಸಪ್ ನಂಬರ್ 9480803552, ಫರಹತಾಬಾದ ಪೊಲೀಸ್ ಠಾಣೆಯ ಫೇಸ್ ಬುಕ್ ವೆಬ್ ಪೇಜ್ ” ಫರಹತಾಬಾದ ಪೊಲೀಸ್ ಸ್ಟೇಷನ್ ಕಲಬುರಗಿ ಸಿಟಿ” ವ್ಯಾಟ್ಸಪ್ ನಂಬರ್ 9480803559, ಟ್ರಾಫಿಕ್ ಪೊಲೀಸ್ ಠಾಣೆ-2ರ ಫೇಸ್ ಬುಕ್ ವೆಬ್ ಪೇಜ್ ” ಟ್ರಾಫಿಕ್ ಪೊಲೀಸ್ ಸ್ಟೇಷನ್ 2, ವ್ಯಾಟ್ಸಪ್ ನಂಬರ್ 9480803554, ಟ್ರಾಫಿಕ್ ಪೊಲೀಸ್ ಠಾಣೆ-1ರ ಫೇಸ್ ಬುಕ್ ವೆಬ್ ಪೇಜ್ “ಟ್ರಾಫಿಕ್ ಪೊಲೀಸ್ ಸ್ಟೇಷನ್ 1 ಕಲಬುರಗಿ ಸಿಟಿ” ವ್ಯಾಟ್ಸಪ್ ನಂಬರ್ 9480803555.
ಅಲ್ಲದೆ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಕಲಬುರಗಿ ನಗರದ ವತಿಯಿಂದ ತುರ್ತು ಸ್ಪಂದನಾ ಸಹಾಯವಾಣಿ ತೆರೆಯಲಾಗಿದ್ದು, ಸಾರ್ವಜನಿಕರು ಈ ಮುಂಚೆ ತುರ್ತು ಸ್ಪಂದನೆಗಾಗಿ 100 ಮತ್ತು 101 ಬದಲಾಗಿ 112 ಗೆ ಕರೆ ಮಾಡಿ ಪೊಲೀಸರ ಸ್ಪಂದನೆಯನ್ನು ತಕ್ಷಣವೇ ಪಡೆದುಕೊಳ್ಳಲು ಡಿಸಿಪಿ ಡಿ.ಕಿಶೋರಬಾಬು ತಿಳಿಸಿದ್ದಾರೆ.