ದೂರು ನೀಡಿದರೆ ಅಧ್ಯಕ್ಷರ ಜೊತೆ ಬೆದರಿಕೆ ಹಾಕಿಸುವ ಸಿರಿವಾರ ಗ್ರಾಪಂ ಪಿಡಿಓ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21: ಗ್ರಾಮದಲ್ಲಿನ ಸಮಸ್ಯೆ ಸರಿಪಡಿಸುವಂತೆ ತಮಗೆ ದೂರು ನೀಡಿದರೆ. ಅಧ್ಯಕ್ಷರಿಗೆ ಪೋನ್ ಕೊಟ್ಟು ಅವರಿಂದ ಬೆದರಿಕೆ ಹಾಕಿಸುತ್ತಾರೆ ತಾಲೂಕಿನ ಸಿರಿವಾರ ಗ್ರಾಮ ಪಂಚಾಯ್ತಿ ಪಿಡಿಓ ಆದಿಲಕ್ಷ್ಮಿ.
ಈ ಬಗ್ಗೆ ಹೇಳಿಕೆ ನೀಡಿರುವ ಕೆ.ಅರ್.ಎಸ್. ಪಕ್ಷದ ಮುಖಂಡ ಅಲ್ಲಿಪುರ ಶ್ರೀನಿವಾಸ ರೆಡ್ಡಿ. ಸಿರಿವಾರ ಗ್ರಾಮದ ಐದನೇ ವಾರ್ಡಿನಲ್ಲಿನ  ಡ್ರೈನೇಜ್ ಸಮಸ್ಯೆ ಬಗೆಹರಿಸುವಂತೆ ಪಿಡಿಓ ಅವರನ್ನು ಪೋನ್ ಮೂಲಕ ಕೇಳಿದರೆ. ಅವರು ಕಾನ್ಫರೆನ್ಸ್ ಕಾಲ್  ಅಧ್ಯಕ್ಷ ಶೇಖಣ್ಣ ಜೊತೆ ಮಾತನಾಡಿ ಎನ್ನುತ್ತಾರೆ.
ಅಧ್ಯಕ್ಷರು ನಮ್ಮ ಊರಿನ ಉಸಾಬರಿ ನಿಮಗೇಕೆ, ಸಮಸ್ಯೆ ಇದ್ದರೆ ನಮ್ಮೂರಿನವರು ನಮಗೆ ಬಂದು ಹೇಳದೆ,ನಿಮಗೆ ಯಾಕೆ ಹೇಳುತ್ತಾರೆ.‌ನೀವೇನಾದ್ರೂ ಬಂದು ಸರಿ ಮಾಡ್ತೀರಾ, ಸರಿ ಮಾಡುವ ನಮ್ಮ ಬಳಿ‌ ಬಂದು ಹೇಳಬೇಕು ಎಂದು ಗದರಿಸುತ್ತಾರೆ. ಈ ಹಿಂದೆ ನೀವು ಹೇಳಿದಾಗ ಸಮಸ್ಯೆ ಬಗೆಹರಿಸಿದೆ ಎನ್ನುತ್ತಾರೆ.
ಅಧಿಕಾರಿಗಳಾದವರು ಜನತೆ ದೂರುಗಳನ್ನು ತಂದಾಗ ಅದಕ್ಕೆ ಸೂಕ್ತರೀತಿಯಲ್ಲಿಯೇ ಉತ್ತರಿಸಬೇಕು. ಅದು ಬಿಟ್ಟು ಜನಪ್ರತಿನಿಧಿಗಳಿಂದ ಬೆದರಿಕೆ ಹಾಕಿಸುವುದು ಸರಿಯಲ್ಲ ಎಂದಿದ್ದಾರೆ.