ದೂರಸಂಪರ್ಕ ಕ್ಷೇತ್ರದ ಕ್ರಾಂತಿಯಿಂದ ರಾಷ್ಟ್ರದ ಪ್ರಗತಿಯ ವೇಗ ಹೆಚ್ಚಳ

ಕಲಬುರಗಿ:ಮೇ.17: ನಮ್ಮ ದೇಶ ಸೇರಿದಂತೆ ಇಡೀ ವಿಶ್ವದಲ್ಲಿ ಉಂಟಾದ ದೂರ ಸಂಪರ್ಕ ಕ್ಷೇತ್ರದಲ್ಲಿನ ಕ್ರಾಂತಿಯಿಂದಾಗಿ, ಜಗತ್ತೇ ಪ್ರಸ್ತುತವಾಗಿ ಒಂದು ಚಿಕ್ಕ ಗ್ರಾಮವೆಂಬ ಪರಿಕಲ್ಪನೆ ಮೂಡಲು ಸಾಧ್ಯವಾಗಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಸಾಧ್ಯವಾಗಿದ್ದು, ದೂರಸಂಪರ್ಕ ಕ್ಷೇತ್ರದ ಕ್ರಾಂತಿಯಿಂದಾಗಿ ರಾಷ್ಟ್ರದ ಪ್ರಗತಿಯ ವೇಗ ಹೆಚ್ಚಳವಾಗಲು ಸಾಧ್ಯವಾಗಿದೆಯೆಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ವಿಶ್ವ ದೂರಸಂಪರ್ಕ ದಿನಾಚರಣೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಕಳಿಸಿದ ಸಂದೇಶದಲ್ಲಿ ಅವರು ತಿಳಿಸಿದರು.

ಪ್ರಾಚೀನ ಕಾಲದಲ್ಲಿ ಸಂಪರ್ಕ ಸಾಧಿಸುವದು ತುಂಬಾ ಕಷ್ಟದಾಯಕವಾಗಿತ್ತು. ಅನೇಕ ಕ್ರಾಂತಿಕಾರಕ ಸಂಶೋಧನೆಗಳ ಮೂಲಕ ಸಾಕಷ್ಟು ಸಾಧನೆಗಳನ್ನು ಮಾಡಿದ್ದರ ಫಲವಾಗಿ ಪ್ರಸ್ತುತವಾಗಿ ಕ್ಷಿಪ್ರ ಕಾಣುತ್ತಿದ್ದೇವೆ. ವಿಶೇಷವಾಗಿ ವಿದ್ಯಾರ್ಥಿಗಳು, ಯುವಕರು ದೂರಸಂಪರ್ಕ ಮಾಧ್ಯಮಗಳಾದ ಆಕಾಶವಾಣಿ,ದೂರದರ್ಶನ, ಕಂಪ್ಯೂಟರ್, ಇಂಟರನೆಟ್, ಮೋಬೈಲ್, ಪತ್ರಿಕೆಗಳಿಂದ ಅನೇಕ ಮಹತ್ವಪೂರ್ಣವಾದ ಮಾಹಿತಿ, ವಿಷಯಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು, ಯುವಕರು ಇವೆಲ್ಲವುಗಳ ಸದ್ಬಳಕೆಯನ್ನು ಮಾಡಿಕೊಂಡು, ರಾಷ್ಟ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕೆಂದರು.

ಎಲ್ಲರಿಗೂ ಅನಕೂಲವಾಗಲಿಯೆಂಬ ಉದ್ದೇಶದಿಂದ ದೂರಸಂಪರ್ಕ ಕೇತ್ರದಲ್ಲಿ ದಿನನಿತ್ಯಲೂ, ನಿರಂತರವಾಗಿ ಹೊಸ ಸಂಶೋಧನೆಗಳು ಜರುಗುತ್ತಿವೆ. ಅದರಲ್ಲಿ ಯುವಕರು ಮೋಬೈಲ್ ಹಾಗೂ ಇಂಟರನೆಟ್ ಬಳಕೆಯನ್ನು ದುರುಪಯೋಗ ಮಾಡಿಕೊಳ್ಳಬಾರದು. ಕರೋನಾ ಮಾಹಿತಿಗೆ ಸಂಬಂಧಿಸಿದಂತೆ ಇ-ಸಂಜೀವಿನಿ ಟೆಲಿಕನ್ಸಂಟೇಶನ್ ಮೂಲಕ ಸಲಹೆ,ಸೂಚನೆಗಳನ್ನು ಪಡೆಉಬಹುದಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದರು.

ಪ್ರಮುಖರಾದ ಸುನೀಲಕುಮಾರ ವಂಟಿ, ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ರಾಜಕುಮಾರ ಬಟಗೇರಿ ಇದ್ದರು.