ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕ್ಯಾಲಿಫೋರ್ನಿಯಾದ ಸಾಂತಾಕ್ರೂಜ್ ವಿವಿಯಲ್ಲಿ ಸಾಮಾಜಿಕ ಹೋರಾಟಗಾರರು ಶಿಕ್ಷಣ ತಜ್ಞರ ಜತೆ ಸಂವಾದ ನಡೆಸಿದರು.
ಕ್ಯಾಲಿಫೋರ್ನಿಯಾ(ಅಮೆರಿಕ),ಜೂ.೧:ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರು ತಮ್ಮ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಬ್ರಿಟನ್ ಪ್ರವಾಸ ಕೈಗೊಂಡಿದ್ದ ವೇಳೆ ರಾಹುಲ್ ಗಾಂಧಿಯವರು ಭಾರತದಲ್ಲಿ ಪ್ರಜಾಪ್ರಭುತ್ವ ಕಗ್ಗೂಲೆಯಾಗುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್ ಅವರ ಈ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನೆಲ್ಲೇ ಕೇಂದ್ರ ಸರ್ಕಾರ ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ಗುರುತರ ಆರೋಪ ಮಾಡಿದ್ದಾರೆ.
ಕ್ಯಾಲಿಫೋರ್ನಿಯಾದ ಸಾಂತಾಕ್ರೂಜ್ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ಕೃತಕ ಬುದ್ಧಿಮತ್ತೆ ಕ್ಷೇತ್ರದ ಪರಿಣಿತರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿ ರಾಹುಲ್‌ಗಾಂಧಿ ನನ್ನ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಹೇಳಿದರು.
ರಾಹುಲ್‌ಗಾಂಧಿ ತಮ್ಮ ದೂರವಾಣಿ ಕದ್ದಾಲಿಕೆಯನ್ನು ’ಹಲೋ ಮೋದಿ ಹಲೋ’ ಎಂದು ಹಾಸ್ಯದ ದಾಟಿಯಲ್ಲಿ ಹೇಳುವ ಮೂಲಕ ತಮ್ಮ ಫೋನ್ ಕದ್ದಾಲಿಕೆಯಾಗುತ್ತಿರುವುದು ಗೊತ್ತಿದೆ. ಪೆಗಾಸಿಸ್ ಸ್ಪೈ ವೇ ಮತ್ತು ಅಂತಹುದೇ ತಂತ್ರಜ್ಞಾನದ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಹೇಳುವ ಮೂಲಕ ಟೆಲಿಫೋನ್ ಕದ್ದಾಲಿಕೆಯಿಂದ ನಾನೇನೂ ಚಿಂತಿತನಾಗಿಲ್ಲ ಎಂದು ಹೇಳಿದರು.ಯಾವುದೇ ಒಂದು ದೇಶವಾಗಲಿ, ರಾಜ್ಯವಾಗಲಿ ಯಾರದೇ ಫೋನನ್ನು ಕದ್ದಾಲಿಕೆ ಮಾಡುವ ನಿರ್ಧಾರ ಮಾಡಿದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಹೋರಾಟ ಮಾಡುವ ಅಗತ್ಯವೂ ಇಲ್ಲ. ನಾನು ಏನು ಮಾಡುತ್ತೇನೆ. ಏನೂ ಮಾತನಾಡುತ್ತೇನೆ ಎಲ್ಲವೂ ಸರ್ಕಾರಕ್ಕೆ ಸಿಗುತ್ತದೆ. ನನಗೇನೂ ಇದರ ಬಗ್ಗೆ ಚಿಂತೆ ಇಲ್ಲ ಎಂದರು.ನನ್ನ ಟೆಲಿಫೋನ್ ಕದ್ದಾಲಿಕೆಯ ನಾಟಕ ೬ ತಿಂಗಳ ಹಿಂದೆ ಭಾರತ್ ಜೋಡೊ ಯಾತ್ರೆ ಆರಂಭಿಸುವ ನಿರ್ಧಾರ ಮಾಡಿದಾಗ ಇದೆಲ್ಲ ಆರಂಭವಾಗಿದೆ. ಭಾರತದಲ್ಲಿ ವಿರೋಧ ಪಕ್ಷಗಳು ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತಿವೆ. ನಮ್ಮ ಹೋರಾಟ ಸ್ಪಷ್ಟವಾಗಿದೆ. ಹೋರಾಟ ಮಾಡುವುದು ನನ್ನ ಹಕ್ಕು ಎಂದರು.
ಸಿಲಿಕಾನ್ ವ್ಯಾಲಿಯ ಸ್ಟಾರ್ಟಪ್ ಉದ್ಯಮಿಗಳ ಗುಂಪಿನೊಂದಿಗೆ ಮಾತನಾಡುವಾಗ ರಾಹುಲ್‌ಗಾಂಧಿ ಡೇಟಾ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ವಿಷಯದ ಬಗ್ಗೆಯೂ ಚರ್ಚೆ ನಡೆಸಿ ಯಾವುದೇ ರಾಷ್ಟ್ರ ಡೇಟಾ ಮಾಹಿತಿ ಗೌಪ್ಯತೆಗೆ ಸಂಬಂಧಿಸಿದಂತೆ ನಿಯಮಗಳನ್ನು ಸ್ಥಾಪಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಮೋದಿ ಉಪನಾಮ ಪ್ರಕರಣದಲ್ಲಿ ತಾವು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳ್ಳುತ್ತೇನೆಂದು ಭಾವಿಸಿರಲಿಲ್ಲ. ಆದರೆ ಈ ಅನರ್ಹತೆ ತಮಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
೨೦೦೦ನೇ ಇಸವಿಯಲ್ಲಿ ತಾವು ರಾಜಕೀಯಕ್ಕೆ ಪ್ರವೇಶಿಸಿದಾಗ ಈ ರೀತಿ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಅಂದುಕೊಂಡಿದ್ದಕ್ಕೆ ವಿರುದ್ಧವಾಗಿ ಈಗ ನಡೆಯುತ್ತಿದೆ ಎಂದು ೫೨ ವರ್ಷದ ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಅನರ್ಹತೆ ನಿಜವಾಗಿ ನನಗೆ ದೊಡ್ಡ ಅವಕಾಶವನ್ನು ಕಲ್ಪಿಸಿದೆ ಎಂದು ಭಾವಿಸುತ್ತೇನೆ ಎಂದರು.೬ ತಿಂಗಳ ಹಿಂದೆ ನಿಜವಾದ ನಾಟಕ ಆರಂಭವಾಯಿತು ಎಂಬುದಾಗಿ ನಾನು ಭಾವಿಸುತ್ತೇನೆ. ಪ್ರತಿಪಕ್ಷಗಳು ಪ್ರಭುತ್ವದ ವಿರುದ್ಧ ಹೋರಾಡಲು ಹೆಣಗಾಡುತ್ತಿವೆ. ಭಾರೀ ಆರ್ಥಿಕ ಪ್ರಾಬಲ್ಯ ಸಂವಿಧಾನಿಕ ಸಂಸ್ಥೆಗಳ ವಶ ನಮ್ಮ ದೇಶದಲ್ಲಿ ಪ್ರಜಾಸತತ್ಮಾಕ ಹೋರಾಟ ಮಾಡಲು ನಾವು ಹೆಣಗಾಡುತ್ತಿದ್ದೇವೆ. ಈ ಸಮಯದಲ್ಲಿ ತಾವು ಭಾರತ್ ಜೋಡೋ ಯಾತ್ರೆ ನಡೆಸಲು ನಿರ್ಧರಿಸಿದ್ದಾಗಿ ಹೇಳಿದರು.
ಕಾಂಗ್ರೆಸ್‌ನ ಸಾಗರೋತ್ತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಯಾಮ್‌ಪಿತ್ರೋಡಾ ಅವರೊಂದಿಗೆ ರಾಹುಲ್‌ಗಾಂಧಿ ಅವರು ಅಮೆರಿಕದ ಸ್ಟಾರ್ಟಪ್ ಕಂಪನಿಗಳ ದಿಗ್ಗಜರನ್ನು ಭೇಟಿ ಮಾಡಿ ತಂತ್ರಜ್ಞಾನ ಅಭಿವೃದ್ಧಿ ಎಲ್ಲದ್ದರ ಬಗ್ಗೆಯೂ ಚರ್ಚೆ ನಡೆಸಿದರು.