
ಮಾನ್ವಿ,ಏ.೦೪- ಕ್ಷೇತ್ರದ ಶಾಸಕ ವೆಂಕಟಪ್ಪ ನಾಯಕ ಅಥವಾ ನಮ್ಮ ಭಾಗದ ಯಾವ ಶಾಸಕರಿಗೆ ಅಭಿವೃದ್ಧಿ ಮಾಡಬೇಕು ಎನ್ನುವ ದೂರದೃಷ್ಟಿಯ ಮನೋಭಾವನೆಯಾಗಲಿ ಪ್ರಾಮಾಣಿಕತೆಯಿಲ್ಲದ ಶಾಸಕರಿಂದ ಯಾವುದೇ ಅಭಿವೃದ್ಧಿ ಸಾದ್ಯವಿಲ್ಲ ಆದರಿಂದ ಎ ಎ ಪಿ ಪಕ್ಷದ ಅಭ್ಯರ್ಥಿ ಶ್ಯಾಮಸುಂದರ ಇವರನ್ನು ಗೆಲ್ಲಿಸಿ ದೆಹಲಿ ಹಾಗೂ ಪಂಜಾಬ್ ರಾಜ್ಯದಂತೆ ಅಭಿವೃದ್ಧಿ ಮಾಡಲು ಸಹಕಾರ ಮಾಡಿರಿ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಭಾಗದ ಶಾಸಕ ನಿರ್ಲಕ್ಷ್ಯದಿಂದ ಐಐಟಿ ತಪ್ಪಿದೆ ಹಾಗೂ ಎಮ್ಸ್ ಬದಲಾಗಿ ಎಮ್ಸ್ ಮಾದರಿ ಆಸ್ಪತ್ರೆ, ಉತ್ತಮ ಶಿಕ್ಷಣ ಪದ್ದತಿಗಳಿಲ್ಲ ಸರಿಯಾಗಿ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಶಾಲೆ, ಕಾಲೇಜು,ಆಸ್ಪತ್ರೆ,ರೈತ ಸೌಲಭ್ಯ, ಮಹಿಳಾ ಸಬಲಿಕರಣ, ಆಡಳಿತ ದೌರ್ಜನ್ಯ, ಕ್ರೀಡಾ ಸ್ಪೂರ್ತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಇಲ್ಲಿನ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ ಆದರಿಂದ ಮಾನ್ವಿ ಸಿರವಾರ ಕ್ಷೇತ್ರದಲ್ಲಿ ನಮ್ಮ ನಿಷ್ಠಾವಂತ ಅಭ್ಯರ್ಥಿ ಶ್ಯಾಮಸುಂದರ ಇವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು..
ನಂತರ ಎಎಪಿ ಅಭ್ಯರ್ಥಿ ಶ್ಯಾಮಸುಂದರ ಮಾತಾನಾಡಿ ಮಾನ್ವಿ ಕ್ಷೇತ್ರದ ಶಾಸಕರು ಅನೈತಿಕ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ ಅವರಿಗೆ ದೂರು ನೀಡಿದ ನಂತರವೇ ಸ್ಥಳಕ್ಕೆ ಪರಿಶೀಲನೆ ಮಾಡುತ್ತಾರೆ ಹಾಗೂ ಕೇವಲ ಹನ್ನೊಂದು ತಿಂಗಳಲ್ಲಿ ಮಾಡಬೇಕಾಗಿದ್ದ ತಾಲೂಕ ಮಟ್ಟದ ಕ್ರೀಡಾಂಗಣವನ್ನು ಚುನಾವಣೆ ನೀತಿ ಸಂಹಿತೆಯಾಗುವ ಕೆಲವೇ ಗಂಟೆಯ ಮುಂಚೆ ಅಷ್ಟು ಅವಸರದಲ್ಲಿ ಉದ್ಘಾಟನೆ ಮಾಡುವ ಅವಶ್ಯಕತೆ ಏನಿತ್ತು ಯಾವುದೇ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅರ್ದಬರ್ದಾ ಕಾಮಗಾರಿಯಾಗಿರುವ ಕ್ರೀಡಾಂಗಣವನ್ನು ಬೇಕಾಬಿಟ್ಟಿಯಾಗಿ ಕೆಲಸ ಮಾಡಿದ್ದಾರೆ ಆದರೂ ಉದ್ಘಾಟನೆಯಾಗಿದ್ದು ಕ್ರೀಡಾಳುಗಳಿಗೆ ಬಾರಿ ನಿರಾಸೆಯನ್ನು ಉಂಟು ಮಾಡಿದೆ ಎಂದರು.
ನಂತರ ಎ ಎ ಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ತಾಲೂಕಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು..
ಈ ಸಂದರ್ಭದಲ್ಲಿ ತಾ ಅಧ್ಯಕ್ಷರಾದ ಶರಣೆಗೌಡ ಕೆಳಗೇರಿ,ನಗರ ಘಟಕ ಅಧ್ಯಕ್ಷ ಯುಸೂಫ್ ಖುರೇಷಿ, ಮುಖಂಡರಾದ ನಾಗರಾಜ್, ಸೈಯದ್ ತಾಹೇರ್ ಹುಸೇನಿ ಮತವಾಲೆ , ಮಕ್ಬೂಲ್ ಪಾಷಾ, ವೆಂಕಟೇಶ ನಾಯಕ, ಬಸವರಾಜ, ದೇವರಾಜ ನಾಯಕ, ಬಸವರಾಜ ನಾಯಕ ಸೇರಿದಂತೆ ಇನ್ನಿತರರು ಇದ್ದರು.