ದೂಪದಹಳ್ಳಿ ಮತದಾನ ಜಾಗೃತಿ

ಕೊಟ್ಟೂರು ಡಿ 24: ತಾಲೂಕಿನ ದೂಪದಹಳ್ಳಿಯಲ್ಲಿ ಇಂದು ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಅಂಧೋಲನ ಮತ್ತು ಡಾನ್ ಬೋಸ್ಕೊಸಂಸ್ಥೆಯ ಸಂಯುಕ್ತಾಶ್ರಯದಲ್ಲಿ
ಕ್ರಿಮ್ ಯೋಜನೆಯ ತಾಲೂಕು ಸಂಯೋಜಕರಾದ ಬಾಣದ ನಾಗರಾಜರವರು ನೈತಿಕ ಮತ್ತು ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಿ” ಮತ ಚಲಾಯಿಸುವುದು ನಿಮ್ಮ ಹಕ್ಕು”ಅದನ್ನು ತಾವುಗಳು ಹಣಕ್ಕಾಗಿ ಮಾರಿಕೊಳ್ಳ ಬೇಡಿ, ನಿಮ್ಮ ಪರವಾಗಿ ಕೆಲಸಮಾಡುವ ವ್ಯಕ್ತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಹಾರಿಸಿ ಕಳುಹಿಸಿಕೊಡಿ ಎಂದು ಹೇಳಿದರು ಮತ್ತು ಕಡ್ಡಾಯವಾಗಿ ಮತದಾನವನ್ನು ಮಾಡುವುದರ ಮುಖಾಂತರ ದೇಶದ ಅಭಿವೃದ್ಧಿ ಯತ್ತ ಚಿಂತಿಸ ಬೇಕೆಂದು ಹೇಳಿದರು, ಈ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ಸಿಬ್ಬಂದಿ ವರ್ಗದವರು, ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಸತ್ಕ್ರಿಯ ಸಂಚನಲ ” ಯೋಜನೆಯ ಜಿಲ್ಲಾ ಸಂಯೋಜಕರು ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು..