ದೂಪದಹಳ್ಳಿಯಲ್ಲಿ ಕೋವಿಡಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಸಂಜೆ ವಾಣಿ ವಾರ್ತೆ ಕೊಟ್ಟೂರು 18: ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಕೋವಿಡಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ವಿಜಯಕುಮಾರ ಹೇಳಿದರು.
ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರಲ್ಲಿನ ತಪ್ಪು ತಿಳುವಳಿಕೆಗಳು ದೂರವಾಗಿ ಲಸಿಕೆ ಹಾಕಿಸಿ ಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗೂಳಿ ರುದ್ರೇಶ್, ತಾಲೂಕು ಪಂಚಾಯಿತಿ ಅಕೌಂಟ್ ಆಪಿಸರ್ ಕೆಂಚಪ್ಪ, ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ ಸೇರಿದಂತೆ ಅನೇಕ ರಿದ್ದರು