ದೂದಪೀರಾಂ ಮಹಾತ್ಮರ 135ನೇ ಉರುಸು

ಲಕ್ಷ್ಮೇಶ್ವರ, ಏ17: ಪಟ್ಟಣದ ಇತಿಹಾಸ ಪ್ರಸಿದ್ಧ ದೂದಪೀರಾಂ ಮಹಾತ್ಮರ ಉರುಸು ಕಾರ್ಯಕ್ರಮ ಏಪ್ರೀಲ್ 21 ಮತ್ತು 22ರಂದು ಜರುಗಲಿದೆ. ಈ ಕುರಿತು ದೂದಪೀರಾಂ ದರ್ಗಾ ಸಮಿತಿ ಸದಸ್ಯ ಎಸ್.ಕೆ. ಹವಾಲ್ದಾರ ಮಾಹಿತಿ ನೀಡುತ್ತ ಈ ಬಾರಿ ಚುನಾವಣೆ ಇರುವುದರಿಂದ ಸರ್ಕಾರದ ನಿಯಮಗಳ ಪ್ರಕಾರ ಸರಳವಾಗಿ ಉರುಸು ಆಚರಿಸಲು ನಿರ್ಧರಿಸಲಾಗಿದೆ. ದಿ. 21ರಂದು ರಾತ್ರಿ 10ಕ್ಕೆ ಸಂದಲ ಗಂಧ ಕಾರ್ಯಕ್ರಮ ಮುಗಿಯಲಿದ್ದು ಮರುದಿನ ಮಧ್ಯಾಹ್ನ 2 ಗಂಟೆಗೆ ತಾಜಮಹಲ್ ಮೆರವಣಿಗೆ ಆರಂಭವಾಗಿ ರಾತ್ರಿ ಹತ್ತಕ್ಕೆ ಕೊನೆಗೊಳ್ಳಲಿದೆ' ಎಂದು ಹೇಳಿದರಲ್ಲದೆಉರುಸು ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಬರುವ ಭಕ್ತರಿಗಾಗಿ ಕುಡಿಯುವ ನೀರು, ಆರೋಗ್ಯ ಸೇವೆಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಎಲ್ಲ ಭಕ್ತರು ಸರ್ಕಾರದ ನಿಯಮಗಳನ್ನು ಪಾಲಿಸಿ ಉರುಸು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ವಕೀಲ ನಜೀರ್‍ಅಹಮ್ಮದ್ ಗದಗ ಮಾತನಾಡಿ `ಉರುಸು ಕಾರ್ಯಕ್ರಮ ಮುಗಿಯುವವರೆಗೆ ದರ್ಗಾ ಸುತ್ತಮುತ್ತ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲು ಪೊಲೀಸರೊಂದಿಗೆ ಚರ್ಚಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ್‍ಸಾಬ್ ಕಣಕೆ, ಉಪಾಧ್ಯಕ್ಷ ಐ.ಕೆ. ಮಿರ್ಜಾ, ಕಾರ್ಯದರ್ಶಿ ಡಿ.ಡಿ. ಕಾರಡಗಿ, ಸದಸ್ಯರಾದ ಕೆ.ಡಿ. ಸೂರಣಗಿ, ಎಫ್.ಎನ್. ಪಲ್ಲಿ, ಎನ್.ಎಚ್. ಸಿದ್ದಿ, ಎಸ್.ಎಚ್. ಶಮಲೇವಾಲೆ, ಎಂ.ಎಚ್. ಸಿದ್ದಾಪುರ, ಎ.ಕೆ. ಸೂರಣಗಿ, ಎಂ.ಎ. ಮುಳಗುಂದ, ಅಂಜುಮನ್ ಇಸ್ಲಾ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ದಾದಾಪೀರ್ ಮುಚ್ಛಾಲೆ, ಫಿರ್ದೋಷ್ ಆಡೂರ, ಜಮೀಲ್ ಸೂರಣಗಿ ಸೇರಿದಂತೆ ಮತ್ತಿತತರು ಇದ್ದರು. ಇದೇ ಸಂದರ್ಭದಲ್ಲಿ ಉರುಸು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳ ಬಿಡುಗಡೆ ನಡೆಯಿತು.