ದೂಡಾ ಸಭಾಂಗಣ ಉದ್ಘಾಟನೆ

ದಾವಣಗೆರೆ.ಜ.೧೧; ದಾವಣಗೆರ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯ ಸಭಾಂಗಣದ ನಾಮಕರಣ ಸಮಾರಂಭವನ್ನು ನಗರಾಭಿವೃದ್ಧಿ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್ ರವರು ಉದ್ಘಾಟಿಸಿದರು‌.ಸಭಾಂಗಣಕೆ ಲೋಕಸಭಾ ಸದಸ್ಯರಾದ  ಜಿ.ಎಂ.ಸಿದ್ದೇಶ್ವರ ಅವರ ತಂದೆಯವರಾದ ಮಾಜಿ ಸಂಸದ ದಿ ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣ ಎಂದು ನಾಮಕರಣ ಮಾಡಲಾಯಿತು.ಈ ಸಂರ್ಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಡಾ. ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮದ‌ ಅಧ್ಯಕ್ಷರಾದ ಪ್ರೊ.ಲಿಂಗಣ್ಣ, ಧೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್, ಧೂಡ ಸದಸ್ಯರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು