ದುಷ್ಯಂತ ನಾಯಕ ದೊರೆ ಅವರಿಗೆ ಪಿಎಚ್ ಡಿ ಪದವಿ

ಕಲಬುರಗಿ:ನ.12:ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ವಿಧ್ಯಾರ್ಥಿ ದುಷ್ಯಂತ ನಾಯಕ ದೊರೆ ಅವರು ಸಲ್ಲಿಸಿದ ಮಹಾಪ್ರಬಂಧ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ. ಹೆಚ್ ಡಿ ಪದವಿ ನೀಡಿದೆ. ದುಷ್ಯಂತ ನಾಯಕ ದೊರೆ ಅವರು ಡಾ.ಅಶೋಕ ಹುಗ್ಗಣ್ಣವರ ನಿವೃತ್ತ ಪ್ರಾಧ್ಯಾಪಕರು ಎಸ್ ಡಿ ಎಂ ಕಾಲೇಜು ಹೊನ್ನಾವರ ಅವರ ಮಾರ್ಗದರ್ಶನದಲ್ಲಿ “ಹೈದ್ರಾಬಾದ್ ಕರ್ನಾಟಕದ ತತ್ವಪದಗಳು ಮತ್ತು ಸಂಗೀತ: ಅಂತರ್ ಸಂಬಂಧದ ನೆಲೆಗಳು( ಆಯ್ದ ತತ್ವಪದಕಾರರನ್ನು ಅನುಲಕ್ಷಿಸಿ)” ಎಂಬ ವಿಷಯದ ಮಹಾಪ್ರಬಂಧ ಮಂಡಿಸಿದ್ದರು. ದುಷ್ಯಂತ ನಾಯಕ ದೊರೆ ಅವರು ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಅವರ ಪುತ್ರರಾಗಿದ್ದಾರೆ