ದುಶ್ಚಟಮುಕ್ತ ಸಮಾಜ ನಿರ್ಮಾಣ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನಾಟಕ ಮೂಲಕ ಪ್ರದರ್ಶನ

ಸೇಡಂ,ಜೂ,16: ತಾಲೂಕಿನ ಕೊಡ್ಲಾ ವಲಯದ ಬೆನಕನಹಳ್ಳಿ ಗ್ರಾಮದಲ್ಲಿಂದು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶೃತಿ ಸಾಂಸ್ಕøತಿಕ ಕಲಾತಂಡದವರಿಂದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನಾಟಕ ಮೂಲಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ತಾಲೂಕಾ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನಾಧಿಕಾರಿ ಶ್ರೀಯುತ ಮಂಜುನಾಥ್ ಎಸ್ ಜಿ ಜ್ಯೋತಿ ಬೇಳಗಿಸುವ ಹಾಗೂ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಂ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಮುಖ್ಯ ಗುರುಗಳು ರೇವಣಸಿದ್ಧ ವಲಯದ ಮೇಲ್ವಿಚಾರಕರಾದ ಯವರು ಮತ್ತು ಬಸವಣ್ಣಪ್ಪ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುವರ್ಣ ಹೊನ್ನಳ್ಳಿ ಮತ್ತು ಸ್ಥಳೀಯ ಸೇವಾ ಪ್ರತಿನಿಧಿಯವರಾದ ಶಿವಲೀಲಾ ಸಿ ಎಸ್.ಸಿ ಸೇವಾದಾರರು ಮಲ್ಲಮ್ಮ ಹಾಗೂ ಶಾಲೆಯ ಶಿಕ್ಷಕರು ಕಾವೇರಿ ಮೇಡಂ ನಮ್ಮ ಪ್ರೀತಿಯ ಫಲಾನುಭವಿಯವರು ಭಾಗವಹಿಸಿದ್ದರು ಬೀದಿ ನಾಟಕದ ಮೂಲಕ ಶುದ್ಧ ಕುಡಿಯುವ ನೀರಿನ ಬಳಕೆ, ಶೌಚಾಲಯ ನಿರ್ಮಾಣ ಮತ್ತು ಬಳಕೆ, ಪರಿಸರ ಸಂರಕ್ಷಣೆ ಗಿಡಮರಗಳ ಬೆಳೆಸುವ ಮಹತ್ವ, ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ,ದುಶ್ಚಟಮುಕ್ತ ಸಮಾಜ ನಿರ್ಮಾಣ ಮುಂತಾಗಿ ಸುಂದರವಾಗಿ ನಾಟಕದ ಮೂಲಕ ಪ್ರದರ್ಶನ ಮಾಡಿ ತೋರಿಸಿದ್ದರು,. ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳನ್ನುಬಹು ಸುಂದರವಾಗಿ ತಿಳಿಸಿಕೊಟ್ಟರು.