ದುಶ್ಚಟದಿಂದ ದೂರವಿರಿ : ಸಂತೋಷ ಶೆಟ್ಟಿ


ಹುಬ್ಬಳ್ಳಿ,ಏ.18: ನಗರದ ರಾಮಲಿಂಗೇಶ್ವರನಗರದ ಎಸ್.ಎಂ.ಕೆ. ಸಭಾಭವನದಲ್ಲಿ ಶ್ರೀ ಕ್ರೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇವರ ಆಶ್ರಯದಲ್ಲಿ ನಡೆದ 1474ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತು.
ಉದ್ಘಾಟನೆಯನ್ನು ನಗರದ ಆರ್ಜುನವಿಹಾರ ವಿಘ್ನೇಶ್ವರ ವಿದ್ಯಾ ಸಂಸ್ಥೆಯ ದ್ರಾಕ್ಷಾಯಣಿ ಆಳವಂಡಿ ನೇರವೇರಿಸಿದರು.
ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಮಾತನಾಡಿದ ಸಂತೋಷ ಆರ್. ಶೆಟ್ಟಿ, ಮದ್ಯದಿಂದ ದೂರವಾದರೆ ಒಂದು ಕುಟುಂಬವು ಈ ಸಮಾಜದಲ್ಲಿ ಗೌರವಯುತವಾಗಿ ಬಾಳಿ ಬದುಕುಬಹುದೆಂದು ಹೇಳಿದರು ಅಲ್ಲದೆ ಇಂದಿನ್ ಯುವ ಪೀಳಿಗೆ ದುಶ್ಚಟದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.
ಶ್ರೀ ಕ್ರೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‍ನ ನಿರ್ದೇಶಕ ಸುರೇಶ ಎಂ ಮಾತನಾಡಿ ಒಂದು ಕುಟುಂಬದಲ್ಲಿ ಮದ್ಯವಸನಿ ಇದ್ದರೆ ಆರ್ಥಿಕವಾಗಿ ಸಧೃಡವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸತೀಶ, ಸ್ವಾಗತಿವನ್ನು ಮಂಜುನಾಥ ನಾಯ್ಕ, ಸರೋಜಾ ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಎಮ್ ಕಾಲಿಮಿರ್ಚಿ, ಪೀರಜಿ ಖಂಡೇಕರ್, ಶಮ್ ಶುದ್ಧಿನ ಹುಬ್ಬಳ್ಳಿ, ಇಮ್ರಾನ್ ಎಲಿಗಾರ, ರಾಘವೇಂದ್ರ ಮುರಗೋಡ, ಹನುಮಂತ ಹರಿವಾಣ, ಶಿವರುದ್ರಪ್ಪ ಬಡಿಗೇರ ಉಪಸ್ಥಿತರಿದ್ದರು.