ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಜನ ಜಾಗೃತಿ ಅಭಿಯಾನ

ಬಸವನಬಾಗೇವಾಡಿ:ಸೆ.26: ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ 156ನೇ ಜಯಂತೋತ್ಸವ ನಿಮಿತ್ಯ ಸಮೀಪದ ಇವಣಗಿ ಹಂಚಿನಾಳ ಹಾಗೂ ನರಸಲಗಿ ಗ್ರಾಮಗಳಲ್ಲಿ ವಿವಿಧ ಮಠಾಧೀಶರಿಂದ ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಜನ ಜಾಗೃತಿ ಅಭಿಯಾನ ಹಾಗೂ ಧರ್ಮ ಸಭೆ ಜರುಗಿತು.

ಶ್ರೀ ಕುಮಾರ ಶಿವಯೋಗಿಗಳ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಬೀಳಗಿಯ ಕಲ್ಮಠದ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾಧಯಾತ್ರೆಯು ಇವಣಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಸ್ವಾಗತಕ್ಕಾಗಿ ತರಲಾದ 7 ಕ್ವಿಂಟಾಲ್ ಹೂವುಗಳಿಂದ ಪುಷ್ಪವೃಷ್ಟಿ ಮಾಡುವ ಮೂಲಕ ವಿವಿಧ ಮಠಾಧೀಶರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು, ಅಪಾರ ಸಂಖ್ಯಯ ಸುಮಂಗಲೇಯರು ಕುಂಬ ಹೊತ್ತು ಪಾಧಯಾತ್ರೆಯಲ್ಲಿ ಪಾಲ್ಗೊಂಡರು.

ಗ್ರಾಮದ ಆರಾಧ್ಯ ದೈವ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಧರ್ಮ ಸಭೆಯಲ್ಲಿ ಜರುಗಿತು, ಬಿಳೂರಿನ ಮುರುಘೇಂದ್ರ ಮಹಾ ಸ್ವಾಮಿಜಿಗಳು ಮಾತನಾಡಿ ಶಿವಯೋಗಿಗಳ 156ನೇ ಜಯಂತೋತ್ಸವದ ನಿಮಿತ್ಯ ವಿವಿಧ ಮಠಾಧೀಶರು ನಿಮ್ಮ ಗ್ರಾಮಕ್ಕೆ ಬಂದಿದ್ದಾರೆ ಪ್ರತಿಯೊಬ್ಬರು ಇಂತಹ ದಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಕರಿಬಂಟನಾಳದ ಶಿವಕುಮಾರ ಸ್ವಾಮೀಜಿ, ಆನಂದ ದೇವರು, ವಿರುಪಾಕ್ಷ ದೇವರು, ದಾನೇಶ್ವರ ದೇವರು, ಷಡಕ್ಷರಿ ದೇವರು ಹಾಗೂ ವಿವಿಧ ಪಕ್ಷದ ಮುಖಂಡರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

ನರಸಲಗಿ ಗ್ರಾಮದಲ್ಲಿ ಅದ್ದೂರಿ ಸ್ವಾಗತ:- ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ 156ನೇ ಜಯಂತೋತ್ಸವ ನಿಮಿತ್ಯ ನರಸಲಗಿ ಗ್ರಾಮಕ್ಕೆ ಆಗಮಿಸಿದ ವಿವಿಧ ಮಠಾಧೀಶರ ಜನಜಾಗೃತಿ ಪಾಧಯಾಥ್ರೆಯನ್ನ ಶಾಲಾ ವಿದ್ಯಾರ್ಥಿಗಳು ತಲೆ ಮೇಲೆ ವಚನ ಪುಸ್ಥಕ ಹೊತ್ತು ಹಾಗೂ ಸುಮಂಗಲೇಯರು ಕುಂಬ ಹೊತ್ತು ವಿವಿಧ ಕಲಾ ಮೇಳಗಳೊಂದಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.