ದುಶ್ಚಟಗಳ ದಾಸರಾಗಬೇಡಿ

ಭಾಲ್ಕಿ:ಜ.13:ಯುವಕರು ದುಶ್ಚಟಗಳಿಗೆ ಮಾರುಹೋಗಿ ಹೇಡಿಗಳಾಗದೇ ತಮ್ಮ ಬದುಕಿನ ಶಿಲ್ಪಿಗಳಾಗಬೇಕು ಎಂದು ಎಮ್.ಆರ್.ಎ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ ಹೇಳಿದರು.
ಪಟ್ಟಣದ ಶ್ರೀಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ಘಟಕದ ವತಿಯಿಂದ ಆಚರಿಸಿದ ಸ್ವಾಮಿ ವಿವೇಕಾನಂದರ 160 ನೇ ಜಯಂತಿ ನಿಮಿತ್ಯ `ರಾಷ್ಟ್ರೀಯ ಯುವ ದಿನ’ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಸ್ಫೂರ್ತಿದಾಯಕರಾಗಿದ್ದರು.ಯುವಶಕ್ತಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಎನ್ನುವುದನ್ನು ಬಲವಾಗಿ ನಂಬಿದ್ದರು. ಅವರ ತತ್ವಾದರ್ಶಗಳು ನಾವು ನಮ್ಮ ಜೀವನದಲ್ಲಿ ಪರಿಪಾಲಿಸಬೇಕು ಎಂದು ಸಲಹೆ ನೀಡಿದರು.
ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಂಕುಶ ಢೋಲೆ ಮಾತನಾಡಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪರಿಣಾಮಕಾರಿ ವಾಣಿಗಳು ವಿದ್ಯಾರ್ಥಿಗಳ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.
ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ.ವೈರಾಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ನಿಜವಾದ ಧರ್ಮ, ಅದರ ಉದ್ದೇಶಗಳ ಕುರಿತು ಉಪನ್ಯಾಸ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಉಕ್ಕಿನ ವಾಣಿಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ತಿಳಿಸಿದರು.
ದರು.ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮೋಹನ ರೆಡ್ಡಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಕೃಷ್ಣಾ ಕುಲಕರ್ಣಿ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಎನ್‍ಸಿಸಿ ಅಧಿಕಾರಿ ಪÀರಮೇಶ್ವರ ಪಾಟೀಲ, ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಶಿವಾಜಿ ಜಗತಾಪ, ನ್ಯಾಯವಾದಿ ಬಾಬುರಾವ ಗಾಮಾ ಸೇರಿದಂತೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು.ಮನಿಷಾ ಮತ್ತು ಕು.ವೈಷ್ಣವಿ ಸ್ವಾಗತಗೀತೆ ಹಾಡಿದರು.ಕು. ಸುಷ್ಮಾ ಸ್ವಾಗತಿಸಿದರು.ಕು.ಸಾರಿಕಾ ನಿರೂಪಿಸಿದರು.