ದುಶ್ಚಟಗಳಿಂದ ದೂರವಿರಿ, ಆರೋಗ್ಯದತ್ತ ಗಮನಹರಿಸಿ : ಚರಂತಿಮಠ

ಬಾಗಲಕೋಟೆ,ಜ.10 : ಬಾಗಲಕೋಟೆ ನವನಗರ ಸೆಕ್ಟರ್ ನಂ . 50ನ ಎದುರಿನ ಅಂಬಾಭವಾನಿ ದೇವಸ್ಥಾನದ ಸಾಂಸ್ಕøತಿಕ ಭವನದಲ್ಲಿ ನವನಗರದ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ , ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ , ನಗರಸಭೆ ನವನಗರ , ಬಾಗಲಕೋಟ ಜಿಲ್ಲಾ ಆರೋಗ್ಯ ಕೇಂದ್ರ ನವನಗರ , ಬಾಗಲಕೋಟ ಅಂಬಾಭವಾನಿ ದೇವಸ್ಥಾನ ಸಮಿತಿ ,ನವನಗರ ಆರಕ್ಷಕರ ಠಾಣೆ ನವನಗರ , ಬಾಗಲಕೋಟ , ಪ್ರಗತಿ ಬಂಧು , ಜ್ಞಾನ ವಿಕಾಸ ಸ್ವ ಸಹಾಯ ಸಂಘಗಳ ಒಕ್ಕೂಟ ಬಾಗಲಕೋಟ ವಲಯ ಇವರ ಸಂಯುಕ್ತ ಆಶ್ರಯದಲ್ಲಿ 1636 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಈ ಮದ್ಯವರ್ಜನ ಶಿಬಿರದಲ್ಲಿ 53 ಜನರು ಒಂಬತ್ತು ದಿನಗಳ ಕಾಲ ಇದ್ದು, ಆ ವ್ಯವಸ್ಥೆಯಿಂದ ತಿಲಾಂಜಲಿ ಇಟ್ಟು, ಹೊಸ ಜೀವನಕ್ಕೆ ಕಾಲಿಡುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ರೂವಾರಿಗಳಾದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಇಂತಹ ಅನೇಕ ಸಮಾಜ ಸುಧಾರಣೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಯಾವುದೇ ವ್ಯಕ್ತಿಇರಲಿ ದುರಾಭ್ಯಾಸದಿಂದ ದೂರವಿರಬೇಕು. ಆಗ ಕುಟುಂಬ ಸಂಕಷ್ಟವನ್ನು ಸರಿಪಡಿಸಬಹುದು. ಇಲ್ಲದಿದ್ದರೆ ಕುಡಿತಕ್ಕೆದಾಸರಾದರೇ ಆರೋಗ್ಯವೂ ಹದಗೆಡುತ್ತದೆ. ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಅಂತಹ ಕೆಟ್ಟ ಚಟಗಳನ್ನು ಬಿಟ್ಟು ಹೊಸ ಬದುಕಿನತ್ತ ಮುಖಮಾಡಬೇಕು. ಉದ್ಯೋಗದಿಂದ ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದರು.
ಗ್ರಾಮೀಣಾಭಿವೃದ್ಧಿ, ಸಂಶೋಧನೆ, ಶಿಕ್ಷಣ ವ್ಯವಸ್ಥೆ, ಮಹಿಳೆಯ ಸ್ವಾವಲಂಬಿ ಜೀವನಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಅಲ್ಲದೇ ಸಾಮೂಹಿಕ ಮದುವೆಗಳನ್ನು ಮಾಡಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಸಮಾಜೋದ್ಧಾರ ಕಾರ್ಯಕ್ರಮಗಳನ್ನು ಮಾದರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜು ನಾಯ್ಕರ್, ರಾಜಣ್ಣ ಕೊರವಿ, ಗಣೇಶ ಬಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಸವರಾಜ ಅವರಾದಿ, ಚಂದ್ರಕಾಂತ ತೇಲಕರ್, ಕೃಷ್ಣಾಜಿ ಅಂಬೋರೆ, ರಂಗನಗೌಡ ದಂಡಣ್ಣವರ ಮತ್ತಿತರರು ಇದ್ದರು.