ದುಶ್ಚಟಗಳಿಂದ ದೂರವಾದಾಗ ಸಮಾಜದಲ್ಲಿ ನೆಮ್ಮದಿ


ಗೋಕಾಕ,ಮೇ.30: ಹೆತ್ತವರನ್ನು ರಕ್ಷಣೆ ಮಾಡುವುದು ಮಕ್ಕಳ ಧರ್ಮ, ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಧರ್ಮ, ಭಕ್ತರ ರಕ್ಷಣೆ ಮಾಡುವುದು ಗುರುಗಳ ಧರ್ಮ, ಆದರೆ ಬಡವರ, ದೀನ ದಲಿತರ ಹಾಗೂ ಇಂತಹ ಕುಡುಕರನ್ನು ಸರಿದಾರಿಗೆ ತರುವ ಕೆಲಸ ಮಾಡುವುದಿದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಮಾತ್ರ ಸಾಧ್ಯ ಎಂದು ಘೊಡಗೇರಿಯ ಶ್ರೀ ಪ್ರಭುದೇವ ಮಹಾಸ್ವಾಮಿಗಳು
ಮೆಲ್ಲಟ್ಟಿ ಗ್ರಾಮದ ಸರಕಾರಿ ಶಾಲೆಯ ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಣ್ಣೂರ ವಲಯದಿಂದ ಆಯೋಜಿಸಿದ್ದ 1660ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ ಎಂದು ಅವರು ಆಶೀರ್ವಚನ ನೀಡಿದರು.
ಧಾರವಾಡದ ಜನಜಾಗೃತಿ ವೇದಿಕೆ ಯೋಜನಾ ಅಧಿಕಾರಿ ಬಾಸ್ಕರ್ ಮಾತನಾಡಿ, ಕುಡಿತದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ನಾಗನೂರ ಮಠದ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು ಮಾತನಾಡಿ,ಡಾ| ಡಿ. ವಿರೇಂದ್ರ ಹೆಗ್ಗಡೆ, ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಂತೆ ಮಾರ್ಗದರ್ಶನದ ಮದ್ಯವರ್ಜನ ಶಿಬಿರವು ಅನೇಕ ಜನರ ಜೀವನವನ್ನು ಉತ್ತಮ ಕೌಶಲ್ಯಯುತ ಜೀವನವನ್ನಾಗಿ ರೂಪಿಸಿದೆ. ಅವರ ಉತ್ತಮ ಕಾರ್ಯಗಳಿಂದ ಜನಜೀವನ ಸ್ವರ್ಗಸದೃಶವಾಗಿದೆ. ಮದ್ಯ ಮುಕ್ತರಿಗೆ ಸಮಾಜದಲ್ಲಿ ಒಂದು ಗೌರವವಿದೆ. ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ, ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ ಎಂದು ಹೇಳಿದರು.
ಈ ಮದ್ಯವರ್ಜನ ಶಿಬಿರದ ಜಿಲ್ಲಾ ಅಧ್ಯಕ್ಷ ಲವಕುಮಾರ ಮಾತನಾಡಿ, ಶಿಬಿರದ ಆರಂಭದಲ್ಲಿ ದುರ್ವರ್ತನೆ ತೋರಿದವರು ಶಿಬಿರದ ಅಂತ್ಯದಲ್ಲಿ ಪರಿವರ್ತನೆಯಾಗುವ ಮೂಲಕ ಇಡೀ ಕುಟುಂಬ ಪರಿವರ್ತನೆಯಾದ ಸಂತ್ರಪ್ತ ಭಾವನೆ ಎಲ್ಲರಲ್ಲೂ ಇದೆ ಎಂದು ಹೇಳಿದರು.
ಈ ಶಿಬಿರದಲ್ಲಿ ಭಾಗವಹಿಸಿದ 78 ಶಿಬಿರಾರ್ಥಿಗಳು ತಮ್ಮ ತಮ್ಮ ನೋವುಗಳನ್ನು ಹೇಳಿಕೊಂಡು, ಮದ್ಯವ್ಯಸನವನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿದರು. ಈ ಶಿಬಿರವು 8 ದಿನಗಳ ನಡೆದು ಮುಕ್ತಾಯ ಕಂಡಿತು ಎಂದು ಹೇಳಿದರು.ಇದೇ ವೇಳೆ
ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಲು ಕಾರಣೀಕರ್ತರಾದ ದಾನಿಗಳಿಗೆ ಸನ್ಮಾನಿಸಲಾಯಿತು.
ಈ ಶಿಬಿರದಲ್ಲಿ ಜಿಲ್ಲಾ ನಿರ್ದೇಶಕ ಲವಕುಮಾರ ,ತಾಲೂಕಾ,ಯೋಜನಾಧಿಕಾರಿಗಳು ಧರ್ಮೇಂದ್ರ, ಶಿಬಿರಾದ್ಯಕ್ಷರು ಡಾ: ಗವಿಮಠ, ಉಪಾದಕ್ಷರು ಶಂಕರ ಬಳೋಬಾಳ, ಶಿಕ್ಷಕರಾದ ಕೆ,ಬಿ,ಕುರಬೇಟ್, ಜಯನಂದ ಮಠದ, ಶಂಕರ ಯಲಿಗಾರ, ಗುರುಸಿದ್ದಪ್ಪ ಕುರುಬೇಟ್,ಎಮ್,ಪಿ,ಹಲಕರ್ಣಿ,ಮೆಲ್ಮಟ್ಟಿ ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಬಜಂತ್ರಿ, ನವ ಜೀವನ ಸಮಿತಿಯ ಸದಸ್ಯರು,,ಮೆಲ್ವಿಚಾರಕರಾದ ಸಂತೋಷ ಲುಲ್ಲಿ,,ಶ್ರೀಮತಿ ಸರಸ್ವತಿ ಹೀರೆಮಠ,,ಸೇವಾ ಪ್ರತಿನಿದಿಗಳು ಹಾಗೂ ಶಿಬಿರಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದರು.