
ಸಂಜೆವಾಣಿ ವಾರ್ತೆ
ಸಂಡೂರು:ಜು: 9 ಯುವಕರು ತಮ್ಮ ಕಲಿಕೆಯನ್ನು ಬಿಟ್ಟು ದುಶ್ಚಟಗಳ ದಾಸರಾಗುತ್ತಿದ್ದು ಅದನ್ನು ತಡೆಯುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ, ಕಾರಣ ಯುವ ಶಕ್ತಿ ದೇಶದ ಶಕ್ತಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹುಚ್ಚು ಸಾಬ್ ತಿಳಿಸಿದರು.
ಅವರು ಪಟ್ಟಣದಲ್ಲಿ ಪೋಲಿಸ್ ಇಲಾಖೆ, ತಾಲೂಕು ಪಂಚಾಯಿತಿ, ಶ್ರೀಶೈಲೇಶ್ವರ ಶಿಕ್ಷಣ ಸಂಸ್ಥೆ, ಸಿ.ಬಿ.ಎಸ್ಸಿ. ಶಾಲೆಯ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಪ್ರತಿ ಹಂತದಲ್ಲಿಯೂ ಸಹ ನಾವು ಒಂದಲ್ಲ ಒಂದು ದುಶ್ಚಟಕ್ಕೆ ಬಲಿಯಾಗುತ್ತಿದ್ದೇವೆ, ಕಾರಣ ಒತ್ತಡದ ಬದುಕು, ಅನುಕರಣೆ, ನಾಯಕತನವನ್ನು ತೋರಿಸುವಂತಹ ಕೆಟ್ಟ ರೀತಿಯ ಗುಣಗಳು ಕಾರಣವಾಗುತ್ತಿವೆ, ವಿದ್ಯಾರ್ಥಿಗಳು ಇದರಿಂದ ಹೊರಬಂದು ಸುಂದರ ಜಗತ್ತು ಇದೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕಾಗಿದೆ, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನುತ್ತೇವೆ, ಅದರೆ ಬಹಳಷ್ಟು ವಿದ್ಯಾರ್ಥಿಗಳು ಈ ಹಂತದಲ್ಲಿಯೇ ದುಶ್ಚಟಗಳ ದಾಸರಾಗುತ್ತಿರುವುದು ಸಮಾಜದ ಬೆಳವಣಿಗೆ ಕುಂಟಿತವಾಗುತ್ತದೆ, ಅದ್ದರಿಂದ ಅವರಿಗೆ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವದ ಅಪಾಯಗಳನ್ನು ಮನಮುಟ್ಟುವಂತೆ, ಅವುಗಳಿಂದ ಯಾವುದೇ ರೀತಿಯ ಲಾಭ ಇಲ್ಲವಾದ ಬಗ್ಗೆ ಮನವರಿಗೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಎನ್.ಸಿ.ಸಿ. ಅಧಿಕಾರಿ ಹುಣಸಿಕಟ್ಟೆ ನಾಗರಾಜ, ಶ್ರೀಶೈಲೇಶ್ವರ ಶಾಲೆಯ ಆಡಳಿತಾಧಿಕಾರಿ ಕುಮಾರ್ ನಾನಾವಟೆ, ಪದವಿ ಕಾಲೇಜಿನ ಉಪನ್ಯಾಸಕರಾದ ಶಂಕರಗೌಡ, ಕಿಶೋರ್, ನರಸಪ್ಪ, ಬಸವರಾಜ ಬಣಕಾರ ಆರೋಗ್ಯ ಇಲಾಖೆಯವರು ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.