ದುರ್ಬಲರಿಗೆ ಸಹಾಯ ಹಸ್ತ ನೀಡಿ

ಹೊಸನಗರ.ಮೇ.೩೧; ಕೊರೋನ ರೋಗ ತೀವ್ರತರ ಹರಡುತ್ತಿದ್ದು ಜನತೆ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳುವ ಜೊತೆಗೆ ಆಗಿಂದಾಗ್ಗೆ ಕೈ ತೊಳೆದು ಕೊಳ್ಳುವ ಮೂಲಕ ಸುಚಿತ್ವ ಕಾಪಾಡಿಕೊಳ್ಳುವಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ್ ತಿಳಿಸಿದರು.ಪಟ್ಟಣದ ಗಂಗನಕೊಪ್ಪ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ನೇಹ ಬಳಗ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದಾನಗಳಲ್ಲಿ ಅನ್ನದಾನ ಪ್ರಮುಖ್ಯತೆ ಹೊಂದಿದೆ. ಹಸಿದ ಒಡಲಿಗೆ ಕೂಳುಣಿಸುವ ಕಾರ್ಯ ಮಹತ್ವ ಪಡೆದಿದೆ. ಲಾಕ್‌ಡೌನ್ ನಂತ ಸಂದರ್ಭದಲ್ಲಿ ಶ್ರಮಿಕವರ್ಗಕ್ಕೆ ಉಳ್ಳವರ ಸಹಾಯ ಹಸ್ತ ಬೇಕಿದೆ. ದಾನ ನೀಡಿ ಆತ್ಮಸಂತೋಷ ಹೊಂದಲ ಇದು ಸಕಾಲವಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಂ.ಎನ್. ಸುಧಾಕರ್, ಬಾವಿಕಟ್ಟೆ ಸತೀಶ್, ಉದಯ ಶೆಟ್ರು, ಇದ್ದರು.