ದುರ್ನಾತಕ್ಕೆ ಎಡೆಮಾಡಿಕೊಟ್ಟ ಪಾಳುಬಿದ್ದ ಕಟ್ಟಡ

ಸೇಡಂ,ಅ.28: ತಾಲೂಕಿನ ಮಾತೃಛಾಯಾ ಕಾಲೇಜಿಗೆ ತೆರಳುವ ರಸ್ತೆಯ ಮಧ್ಯದಲ್ಲಿ ಕೆನರಾ ಬ್ಯಾಂಕ್ ಮುಂಭಾಗದ ಅನಾವಶ್ಯಕ ಪಾಳುಬಿದ್ದ ಕಟ್ಟಡದ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಅವಶ್ಯಕವಿಲ್ಲದ ವಸ್ತುಗಳನ್ನು ಈ ಸ್ಥಳದಲ್ಲಿ ಹಾಕುತ್ತಿರುವುದರಿಂದ ಹಾಗೂ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ನಾತ ಬರುತ್ತಿದು.
ಈ ಕಟ್ಟಡದಿಂದ ಸುತ್ತಮುತ್ತಲಿನ ಅಂಗಡಿಯವರಿಗೆ ದುರ್ನಾಥ ಬರುತ್ತಿದ್ದರು ಮೂಗು ಮುಚ್ಚಿಕೊಂಡೆ ಇರುತ್ತಿರುವುದು ದುರದಷ್ಟಕರ. ದಾರಿಹೋಕರಿಗೆ ದುರ್ನಾತದಿಂದ ತಲೆ ತಿರುಗಿ ಬೀಳುವಂತೆ ಆಗುತ್ತದೆ ಎಂದು ಕೇಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಟ್ಟಡ ಸಂಬಂಧಪಟ್ಟವರಿಗೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಿಳಿಸಿ ಸ್ವಚ್ಛತೆಗೆ ಪ್ರಮುಖ ಆದಿತ್ಯ ನೀಡುವಂತೆಯೂ ತಿಳಿಸಬೇಕಾಗಿದೆ.