ದುರ್ಘಟನೆಗಳು ಜರುಗದಂತೆ ಎಚ್ಚರ ವಹಿಸಲು‌ ಮನವಿ

ಸಂಜೆವಾಣಿ ವಾರ್ತೆ

 ಹಿರಿಯೂರು ಆ. ೪ – ಇತ್ತೀಚೆಗೆ ಚಿತ್ರದುರ್ಗದಲ್ಲಿ ಕಾವಾಡಿಗರ ಹಟ್ಟಿಯಲ್ಲಿ ನಡೆದಂತಹ ದುರ್ಘಟನೆ  ಇಡೀ ಮನುಕುಲವೇ ಬೇಸರ ಪಡುವ  ಘಟನೆಯಾಗಿದೆ ಇಂತಹ ಘಟನೆ ಮತ್ತೊಮ್ಮೆ ಜರುಗದಂತೆ ಎಚ್ಚರ ವಹಿಸಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪಿಡಿಒಗಳಲ್ಲಿ  ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಹಿರಿಯೂರಿನ  ಗೋಪಿ ಯಾದವ್ ಮನವಿ ಮಾಡಿದ್ದಾರೆ . ಎಲ್ಲಾ ಪಿಡಿಒಗಳು ಗ್ರಾಮ ಪಂಚಾಯಿತಿಗೆ ಪ್ರತಿನಿತ್ಯ ಭೇಟಿಕೊಟ್ಟು ಹಳ್ಳಿಗಳ ಸ್ವಚ್ಛತೆಗೆ ಮತ್ತು ನೀರಿನ ಟ್ಯಾಂಕರ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವುದು ಚರಂಡಿ ಗಳನ್ನು ಶುಚಿ ಮಾಡಿಸುವುದು ಡೆಂಗೆ ಮಲೇರಿಯ ಬರದಂತೆ ಸುಚಿತ್ವ ಕಾಪಾಡುವಂತೆ ಜಿಲ್ಲೆಯ ಎಲ್ಲಾ ಪಿಡಿಒಗಳಿಗೆ ಜಿಲ್ಲಾ ಪಂಚಾಯತಿ ಕಾರ್ಯಾ ನಿರ್ವಹಣಾಧಿಕಾರಿಯವರಿಗೆ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ಕಾಡುಗೊಲ್ಲ ಸಮಾಜದ ಮುಖಂಡರಾದ  ಗೋಪಿ ಯಾದವ್  ಇವರು ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರುಗಳಲ್ಲಿ ಹಳ್ಳಿಯ ಹಿರಿಯ ಮುಖಂಡರಲ್ಲಿ ಜಾಗ್ರತೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಬಡವರಿಗಾಗಿ ಹಲವಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ನಾಗರಿಕರು ಸರ್ಕಾರದ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ  ಗೋಪಿ

 ಯಾದವ್ ಮನವಿ ಮಾಡಿದ್ದಾರೆ.