ದುರ್ಗಾ ವಿಗ್ರಹಕ್ಕೆ ಹೂಮಾಲೆ ಹಾಕಲು ಏಣಿ ವ್ಯವಸ್ಥೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.02:: ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿದ್ದ ಬೃಹತ್ ದುರ್ಗಾಮಾತೆಯ ವಿಗ್ರಹಕ್ಕೆ  ಹೂಮಾಲೆ ಹಾಕಲು ಅಧುನಿಕರೀತಿಯ ಏಣಿ ವ್ಯವಸ್ಥೆಯನ್ನು ಧಾರ್ಮಿಕ ಇಲಾಖೆ ಮಾಡಿದೆ.
ಈ ವರಗೆ ಈ ವಿಗ್ರಹಕ್ಕೆ ಹೂ ಮಾಲೆ ಹಾಕಲು ವಿಗ್ರಹಕ್ಕೆ ತಾಗಿ ಏಣಿ ಇರಿಸಿ, ಅದರ ಮನುಷ್ಯ ಏರಿ ಹೂ‌ಮಾಲೆ ಹಾಕಬೇಕಿತ್ತು.‌ಈ ಬಗ್ಗೆ ಸಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ. ಏಣಿ ವ್ಯವಸ್ಥೆ ಮಾಡಲು ಕೋರಿದ್ದರು. ಈಗ 26 ವರೆ ಲಕ್ಷ ರೂ ವೆಚ್ಚದಲ್ಲಿ ಈ ಏಣಿ ವ್ಯವಸ್ಥೆ ಮಾಡಲಾಗಿದೆಂದು ಇಲಾಖೆಯ ಅಧಿಕಾರಿ ಪ್ರಕಾಶ್ ರಾವ್ ತಿಳಿಸಿದ್ದಾರೆ.