ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಉತ್ಸವ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಅ16: ಮುರಗೋಡ ರಸ್ತೆಯ ಬಸವನಗರದ 2 ನೇ ಕ್ರಾಸ್ ನಲ್ಲಿರುವ ಶ್ರೀ ಮಾತಾ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಇಂದು ನವರಾತ್ರಿಯ ದಸರಾ ಉತ್ಸವಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಧರ್ಮದರ್ಶಿ ವೇದುಮೂರ್ತಿ ಡಾ. ಮಹಾಂತಯ್ಯಾ ಆರಾದ್ರಿಮಠ ಶಾಸ್ತ್ರೀಗಳ ಸಾನಿಧ್ಯದಲ್ಲಿ ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ನವರಾತ್ರಿಯ ಮೊದಲ ದಿನವಾದ ಇಂದು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮಹಾ ಚಂಡಿಕಾ ಹೋಮಕ್ಕೆ ಪೂರ್ಣಹುತಿ ಸಲ್ಲಿಸಿದರು.
ದೇವಸ್ಥಾನದ ವತಿಯಿಂದ ಡಾ. ವಿಶ್ವನಾಥ ಪಾಟೀಲರನ್ನು ಸನ್ಮಾನಿಸಿ ಆಶೀರ್ವದಿಸಲಾಯಿತು.
ಈ ಸಂದರ್ಭದಲ್ಲಿ ವೇದಮೂರ್ತಿ ಪ್ರಶಾಂತ ಹಿರೇಮಠ, ವೇದಮೂರ್ತಿ ವೀರೇಶ ನಂದಳ್ಳಿಮಠ, ವೇದಮೂರ್ತಿ ವಿಜಯ ರುದ್ರಾಕ್ಷಿಮಠ, ಮಹಾಂತೇಶ ಹಿರೇಮಠ ವೇದಮೂರ್ತಿ ಮಹೇಶ ಹಿರೇಮಠ ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಸೇರಿದಂತೆ ಅಕ್ಕನ ಬಳಗದ ಮಹಿಳೆಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.