ದುರ್ಗಾದೇವಿ ಹಾಗೂ ಚಂದ್ರಾದೇವಿ 8 ನೇ ವರ್ಷದ ಅಗ್ನಿ ಪ್ರವೇಶ

ಕೊಲ್ಹಾರ:ಮೇ.17: ತಾಲೂಕಿ ಸುಕ್ಷೇತ್ರ ಹಣಮಾಪೂರ(ಗೂಗಿಹಾಳ) ಗ್ರಾಮದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ಜರಗುವ ದುರ್ಗಾದೇವಿ ಹಾಗೂ ಚಂದ್ರಾದೇವಿ 8 ನೇ ವರ್ಷದ ಅಗ್ನಿ ಪ್ರವೇಶ ಹಾಗೂ ಜಾತ್ರಾ ಮಹೋತ್ಸವವು ಮೇ.20 ರಿಂದ 22 ರವರೆಗೆ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವದು ಎಂದು ಜಾತ್ರಾ ಕಮಿಟಿ ತಿಳಿಸಿದೆ.
ಮೇ.20 ರಂದು ಸೋಮವಾರ ಸಾಯಂಕಾಲ 4 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮಕ್ಕೆ ದೇವಿಯನ್ನು ಬರಮಾಡಿಕೊಳ್ಳುವುದು.ರಾತ್ರಿ: 7 ಗಂಟೆಗೆ ಮನಮೋಹಕ ಆಕಾಶ ಚಿತ್ತಾರದ ಬಿರಿಸು ಬಾಣಿನ ವರ್ಣರಂಜಿತ ಚಿತ್ರ-ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಜರಗುವದು.ಅದೇ ದಿನ ರಾತ್ರಿ:10 ಗಂಟೆಗೆ ಮುಕ್ತ ಕಬಡ್ಡಿ ಪಂದ್ಯಾವಳಿಗಳು ಜರಗುವವು.
ಮೇ.21 ರಂದು ಮಂಗಳವಾರ ಬೆಳಿಗ್ಗೆ:8 ಗಂಟೆಗೆ ಶಾಸ್ತ್ರೋಕ್ತವಾಗಿ ಹಲವು ಪೂಜಾ ಕಂಕೈರ್ಯಗಳ ಮೂಲಕ ದುರ್ಗಾದೇವಿ ಹಾಗೂ ಚಂದ್ರಾದೇವಿಯ ಉಡಿ ತುಂಬುವ ಕಾರ್ಯಕ್ರಮ ಜರಗುವದು.ಮದ್ಯಾಹ್ನ 12 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಜರಗುವದು. ನಂತರ ಮದ್ಯಾಹ್ನ 2 ಗಂಟೆಗೆ 60 ಕೆ.ಜಿ ತೂಕದ ಚೀಲ ಹೊತ್ತೋಡುವ ಸ್ಪರ್ಧೆ ಜರಗುವದು.ಅದೇ ದಿನ ರಾತ್ರಿ:8 ಗಂಟೆಗೆ ಹಾಲು ಹಲ್ಲಿನ ಟಗರಿನ ಕಾಳಗ ಹಾಗೂ ರಾತ್ರಿ 9 ಗಂಟೆಗೆ 2 ಹಲ್ಲಿನ ಟಗರಿನ ಕಾಳಗ ಜರಗುವವು. ಯಂಗ್ ???ಂಡ್ ಎನರ್ಜಿ ಉಳ್ಳಾಗಡ್ಡಿ ಹಮಾಲರ ಸಂಘದಿಂದ ಮಹಾ ಅನ್ನದಾಸೋಹ ಜರಗುವದು.
ಮೇ.22 ರಂದು ಬುಧವಾರ ಬೆಳಿಗ್ಗೆ: 10 ಗಂಟೆಗೆ ಗಂಗಾಸೀತಾಳದಿಂದ ಸಕಲ ವಾದ್ಯ ವೈಭವಗಳ ಸಂಭ್ರಮದೊಂದಿಗೆ ದುರ್ಗಾದೇವಿ ಹಾಗೂ ಚಂದ್ರಾದೇವಿ ಯರನ್ನು ಬರಮಾಡಿಕೊಂಡು ಅಗ್ನಿ ಪ್ರವೇಶ ಕಾರ್ಯಕ್ರಮ ಜರಗುವದು.ನಂತರ ಮದ್ಯಾಹ್ನ 2 ಗಂಟೆಗೆ ಮನುಷ್ಯರ ತೆರಬಂಡಿ ಸ್ಪರ್ದೆ ಜರಗುವದು. ಮದ್ಯಾಹ್ನ 3 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ದೆ ಜರಗುವದು. ನಂತರ ಮದ್ಯಾಹ್ನ 4 ಗಂಟೆಗೆ ಎತ್ತಿನ ದಿಂಡಿನ ರೇಸ್ ಜರಗುವದು. ಅದೇ ದಿನ ಎಲ್ಲ ಭಕ್ತಾಧಿಗಳಿಗೆ ಕಲ್ಲಪ್ಪ,ಪರಮಪ್ಪ ಹಾಗೂ ಸಂಗಪ್ಪ ಬರಗಿ ಪರಿವಾರದಿಂದ ಮಹಾ ಅನ್ನದಾಸೋಹ ಜರಗುವದು. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತಲಿನ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಕಮಿಟಿ ಪ್ರಕಟಣೆಗೆ ತಿಳಿಸಿದೆ.
ಬಾಕ್ಸ್ : ದುರ್ಗಾದೇವಿ ಹಾಗೂ ಚಂದ್ರಾದೇವಿ 8 ನೇ ವರ್ಷದ ಅಗ್ನಿ ಪ್ರವೇಶ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮೇ.22 ರಂದು ಬುಧವಾರ ರಾತ್ರಿ: 10 ಗಂಟೆಗೆ ಅಂಜನಿಪುತ್ರ ಕಲಾಬಳಗ ಚಿಕ್ಕಾಲಗುಂಡಿಯವರ ತಾಯಿಯ ಋಣ ,ಮಣ್ಣಿನ ಗುಣ ಅರ್ಥಾತ ಕರಿಮಣಿ ಮಾಲಿಕ ನೀನಲ್ಲಾ ಎಂಬ ಸುಂದರ ಸಾಮಾಜಿಕ ಹಾಸ್ಯ ಭರಿತ ನಾಟಕ ಜರಗುವದು. ನಾಟಕದ ದಿವ್ಯ ಸಾನಿಧ್ಯವನ್ನು ವೇ.ಮೂ.ಶಿವಾನಂದಸ್ವಾಮಿ ಹಿರೇಮಠ ವಹಿಸುವರು.ಉದ್ಘಾಟನೆಯನ್ನು ಸಕ್ಕರೆ,ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ನೇರವೇರಿಸುವರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಜ್ಯೋತಿ ಬೆಳಗಿಸುವರು.ಅಧ್ಯಕ್ಷತೆಯನ್ನು ಗ್ರಾಮದ ಗಣ್ಯರಾದ ಶರಣಗೌಡ ಪಾಟೀಲ ವಹಿಸುವರು.ನಾಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಅನೇಕ ಗಣ್ಯ ಮಾನ್ಯರು ಭಾಗವಹಿಸುವರು.