
ಹಿರಿಯೂರು ಮಾ. 8- ಹಿರಿಯೂರು ನಗರ ದೇವತೆ ಶ್ರೀ ರಾಜಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಗಂಗಾ ಪೂಜೆ, ಕಳಸ ಪೂಜೆ, ಕಂಕಣೋತ್ಸವ, ಅರ್ಚನೆ, ಅಭಿಷೇಕ ಹಾಗೂ ನಗರದ ಸುಮಂಗಲೆಯರಿಂದ ದುರ್ಗಾಪರಮೇಶ್ವರಿಗೆ ಅಕ್ಕಿ ತಂಬಿಟ್ಟಿನ ಆರತಿ ನಡೆಯಿತು. ಮಧ್ಯಾಹ್ನ ದುರ್ಗಾ ದೇವಿಯ ಭಜನೆ ದೇವಿ ಪಾರಾಯಣ ಮತ್ತು ಕೀರ್ತನೆ ಏರ್ಪಡಿಸಲಾಗಿತ್ತು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಹಿರಿಯೂರು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು