ದುರ್ಗಮ್ಮ ಸರ್ಕಲ್ ನಲ್ಲಿ ಕೊರೋನಾ ಜಾಗೃತಿ ಚಿತ್ರ

ಬಳ್ಳಾರಿ ಮೇ 27 : ನಗರದ ದುರ್ಗಮ್ಮ ದೇವಸ್ಥಾನದ ಸರ್ಕಲ್ ನಲ್ಲಿ ಇಂದು ನಗರದ ಹಲವಾರು ಜನ‌ ಕಲಾವಿದರು ಸೇರಿ ಕೊರೋನಾ ಜಾಗೃತಿಯ ಚಿತ್ರ ಬಿಡಿಸಿದ್ದಾರೆ.
ಚಿತ್ರದಲ್ಲಿ ಕೊರೋನಾ ಸೋಂಕಿನ‌ ಬಗ್ಗೆ ಭಯಬೇಡ, ಲಸಿಕೆ ಹಾಕಿಸಿ ಕೊರೋನಾ ಓಡಿಸಿ ಎಂದು ಬರೆದಿದೆ.
ಲಸಿಕೆ ಹಾಕಿಸಿ ಎಂದು ಬರೆಯುವ ಬದಲು ಲಸಿಕೆ ಹಾಕಿಸಿಕೊಳ್ಳಿ ಎಂದು ಬರೆಯಬೇಕಿತ್ತು. ವಿಚಿತ್ರ ಎಂದರೆ ಈ ಚಿತ್ರ ನೋಡಿದ ಜನ‌ ಲಸಿಕೆ ಹಾಕಿಸಿಕೊಳ್ಳಬೇಕೆಂದರೆ ಜಿಲ್ಲಾ ಆಸ್ಪತ್ರೆಯಲ್ಲಿನ‌ ಲಸಿಕಾ ಕೇಂದ್ರವು ಲಸಿಕಾ ಕೊರತೆಯಿಂದ ಬಂದ್ ಆಗಿದೆ.