ದುರ್ಗಮ್ಮ ಗುಡಿ ರೈಲ್ವೇ ಅಂಡರ್ ಬ್ರಿಡ್ಜ್ ವಿಸ್ತರಣೆಗೆ   ರೇಲ್ವೇ ಇಲಾಖೆಗೆ ರೂ.8.84 ಕೋಟಿ ಡಿಡಿ ಹಸ್ತಾಂತರಿಸಿದ ಬುಡಾ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ನ.18: ನಗರದ  ದುರ್ಗಮ್ಮ ದೇವಸ್ಥಾನದ ಬಳಿಯ ರೈಲ್ವೇ ಕೆಳ ಸೇತುವೆ  ವಿಸ್ತರಣೆ ಕಾಮಗಾರಿಗೆ  ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ.8.84 ಕೋಟಿ ಮೊತ್ತದ ಡಿಡಿ ಯನ್ನು ರೈಲ್ವೇ ಇಲಾಖೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿನ್ನೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಾರಿಗೆ  ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಎಡಿಸಿ ಮಂಜುನಾಥ, ಬಳ್ಳಾರಿ ಮಹಾನಗರಪಾಲಿಕೆ ಆಯುಕ್ತ ರುದ್ರೇಶ್, ಬುಡಾ ಆಧ್ಯಕ್ಷ ಮಾರುತಿ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್  ಹಾಗಿ ಇತರರು ಇದ್ದರು.