ದುರ್ಗಮ್ಮನ ಹುಂಡಿತಲ್ಲಿತ್ತು 42.36 ಲಕ್ಷ ರೂ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.10: ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮನ ದೇವಸ್ಥಾನದ ನಾಲ್ಕು ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ನಿನ್ನೆ ಎಣಿಕೆ ಮಾಡಿದ್ದು. ಅದರಲ್ಲಿ 42 ಲಕ್ಷದ 36 ಸಾವಿರದ 765 ರೂ ನಗದು ಹಣ ಮತ್ತು 21.850 ಗ್ರಾಂ ಚಿನ್ನಾಭರಣ, 975 ಗ್ರಾಂ ಬೆಳ್ಳಿ ಸಾಮಾನುಗಳು ದೊರೆತಿವೆ.
ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್, ದೇವಸ್ಥಾನದ  ಪ್ರಧಾನ ಧರ್ಮಕರ್ತ ರಾಜಶೇಖರ್, ಕಾರ್ಯನಿರ್ವಾಹಕ ಅಧಿಕಾರಿ‌ ಹನಂಮತಪ್ಪ, 20 ಜನ ಹುಂಡಿ ಎಣಿಕೆದಾರರು  ಈ ಸಂದರ್ಭದಲ್ಲಿ ಇದ್ದರು.