ದುರ್ಗದಲ್ಲಿ ಟಿಪ್ಪು ಜಯಂತಿ ಆಚರಣೆ

ಚಿತ್ರದುರ್ಗ.ನ.೧೧; ದೇಶ ಭಕ್ತ ಟಿಪ್ಪು ಸುಲ್ತಾನ್ ಅವರ ಜಯಂತೋತ್ಸವವನ್ನು ಚಿತ್ರದುರ್ಗದ ತರಾಸು ರಂಗಮAದಿರದಲ್ಲಿ ಬುಧವಾರದಂದು ಅತ್ಯಂತ ಸರಳವಾಗಿ ಆಚರಿಸಲಾಯಿತುಕರ್ನಾಟಕ ರಾಜ್ಯ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಟಿಪ್ಪು ಅಭಿಮಾನಿಗಳು, ಮುಸ್ಲಿಂ ಸಮಾಜ ಹಾಗೂ ಇತರೆ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು. ಕನ್ನಡ ನಾಡಿಗೆ ಟಿಪ್ಪು ಸುಲ್ತಾನ್ ಕೊಟ್ಟಿರುವ ಕೊಡುಗೆಯನ್ನು ಗಣ್ಯರು ಸ್ಮರಿಸಿದರು ಕೆಪಿಸಿಸಿ ಇಂಟೆಕ್ ಅದ್ಯಕ್ಷ ಎ.ಜಾಕೀರ್ ಹುಸೇನ್ ಮಾತನಾಡಿ, ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತ. ಅವರ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು ಟಿಪ್ಪ ಸುಲ್ತಾನ್ ಜಯಂತಿಯನ್ನು ನಾಡಿನ ಸೌಹಾರ್ಧತೆಯ ಸಂಕೇತವಾಗಿ ಆಚರಣೆ ಮಾಡಬೇಕು. ಕೇವಲ ಮುಸ್ಲಿಂ ಜನಾಂಗ ಮಾತ್ರವಲ್ಲ, ಬೇರೆ ಬೇರೆ ಸಮಾಜದ ಮುಖಂಡರು, ಜನಪರ ಸಂಘಟನೆಗಳು, ಸಾಹಿತಿಗಳು ಒಳಗೊಂಡAತೆ ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ಆಚರಣೆ ಮಾಡಲು ಚಿಂತನೆ ಮಾಡಬೇಕಿದೆ. ಈ ದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಂಡು ಬದುಕಬೇಕು. ಎಲ್ಲರನ್ನೂ ವಿಶ್ವಾಸದಿಂದ ಕಾಣುವ ವಾತಾವರಣ ನಿರ್ಮಾಣವಾಗಬೇಕು ಎಂದು ಜಾಕೀರ್ ಹುಸೇನ್ ಸಲಹೆ ನೀಡಿದರು ಕರ್ನಾಟಕ ರಾಜ್ಯ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಅಲಿ, ಮುಖಂಡರಾದ ಹೆಚ್.ಅನ್ವರ್‌ಸಾಬ್, ವಕೀಲರಾದ ರಹಮತ್ ಉಲ್ಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್,ಓ ಶಂಕರ್, ಮುನಿರಾ, ಶಬ್ಬೀರ್, ಸಾಧಿಕ್, ಸರ್ದಾರ್ ಅಹಮದ್ ಮಹಮದ್ ಪಾಷ, ನಜ್ಮತಾಜ್, ದುರುಗೇಶಪ್ಪ, ಡಿ.ಎನ್.ಮ್ಯಲಾರಪ್ಪ, ಜಮೀರ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು