ದುರಾಡಳಿತ,ಅಕ್ರಮ ವಿರುದ್ದ ಸದಾ ನಿಗಾ:ನಡಹಳ್ಳಿ

ಮುದೇಬಿಹಾಳ:ಅ.29: ಈ ಹಿಂದೆ ಪುರಸಭೆ ಆಢಳಿತ ಅವಧಿಯಲ್ಲಿ ನಡೆಸಿದ ದುರಾಢಳಿತ ಅಕ್ರಮ ಹಾಗೂ ಅನಧಿಕೃತ ಕಾನೂನು ಬಾಹಿರ ಚಟುವಟಿಕೆಗಳಿಗೆ ನಡೆಯದಂತೆ ಆಡಳಿತ ಪಕ್ಷದವರ ಮೇಲೆ ಸದಾ ನಿಗಾವಹಿಸಿ ಎಚ್ಚರಿಸುವ ಮೂಲಕ ಮುಂದಿನ ಆರು ತಿಂಗಳು ಸಧ್ಯ ನಮ್ಮ ಬಿಜೆಪಿಯ ಎಲ್ಲ ಸದಸ್ಯರು ವಿರೋಧ ಪಕ್ಷ ಸ್ಥಾನದಲ್ಲಿದ್ದುಕೊಂಡೆ ಸಮಗ್ರ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಮಗದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ವಾಗ್ದಾಳಿ ನಡೆಸಿದರು

ಪಟ್ಟಣದ ತಮ್ಮ ದಾಸೋಹ ಭವನದಲ್ಲಿ ಬುಧುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಧ್ಯ ಪುರಸಭೆ ಚುನಾವಣೆಯಲ್ಲಿ ನಮ್ಮ ಬಿಜೆಪಿ ಎಂಟು ಜನ ಸದಸ್ಯರು ಹಾಗೂ 4 ಜನ ಪಕ್ಷೇತರ ಸದಸ್ಯರು ನಮ್ಮೋಂದಿಗ ನಿರಂತರ ಸಂಪರ್ಕದಿಂದಿರುವ ಕಾರಣ ಸಾಮಾನ್ಯವಾಗಿ ರಾಜ್ಯದಲ್ಲಿ ನಮಮದೇ ಸರಕಾರ ಇರುವುದರಿಂದ ನಮ್ಮದೇ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರವಿತ್ತು.

ಆದರೇ ಜೆಡಿಎಸ್ ನ ಇಬ್ಬರು ಸದಸ್ಯರು ಕಾಂಗ್ರೇಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಹಿನ್ನೇಲೆಯಲ್ಲಿ ನಮಗೆ ಅಧಿಕಾರದಿಂದ ವಂಚಿತರಾಗಬೇಕಾಯಿತು ಎಂದರೇ ಪುರಸಭೆ ಚುನಾವಣೆ ವೇಳೆ 5 ಕಡೆ ಅಧಿಕೃತ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತಪ್ಪಿನಿಂದಾಗಿ ಕೇವಲಲ 8 ಜನ ಸದಸ್ಯರನ್ನ ಮಾತ್ರ ಪಡೆಯಲು ಸಾಧ್ಯವಾಯಿತು, ಮುದ್ದೇಬಿಹಾಳ ಪುರಸಭೆ ಇಷ್ಟು ಜನ ಸದಸ್ಯರ ಆಯ್ಕೆಗೊಂಡಿದ್ದು ಇತಿಹಾಸÀವೇ ಸರಿ ಆದರೆ ಸಧ್ಯ ಇದಕ್ಕೆ ನಾವು ಧೈರ್ಯಕಳೆದುಕೊಳ್ಳುವ ಪ್ರಶ್ನೇಯೇ ಇಲ್ಲ.

ಮಾಜಿ ಸಚಿವ ಸಿ ಎಸ್ ನಾಡಗೌಡ ಅವರು ಕಳೆದ 25 ವರ್ಷ ತಮ್ಮ ಆಡಳಿತಾವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಈ ಬಾರಿ ಜನರೇ ತಕ್ಕ ಉತ್ತರ ನೀಡಿದ್ದಾರೆ 24 ಗಂಟೆ ಕುಡಿಯುವ ನೀರು, ಹುನಗುಂದ ಮುದ್ದೇಬಿಹಾಳ ತಾಳಿಕೋಟಿ ರಾಜ್ಯ ಹೆದ್ದಾರಿ ತಾವು ತಮ್ಮ ಅಧಿಕಾರದಲ್ಲಿ ಪ್ರಸ್ಥಾವನೆ ಸಲ್ಲಿಸಿದ್ದರಿ ಆದರೇ ಕೇವಲ 11.5 ರಸ್ತೆ ಮಾತ್ರ ಪ್ರಾರಂಭಿಸಿದರಿ ಆದರೆ ನಾನು ಬಂದಮೇಲೆ ಸರಿಯಾದ ನೀಲನಕ್ಷೇ ಸುಸಜ್ಜಿತ ರಸ್ತೆವಿಭಜಕ, ಇದರ ಮದ್ಯೆ ವಿದ್ಯುತ್ ಬೀದಿ ದೀಪ, ಇವುಗಳನ್ನುಹೆಚ್ಚುವರಿಯಾಗಿ ಅನುದಾನ ತರುವ ಮೂಲಕ ಸುಂದರವಾಗಿ ಕಾಣುವಂತೆ ಮಾಡಿದ್ದೇನೆ.

ತಮ್ಮ ಅವಧಿಯಲ್ಲಿ ಇಣಚಗಲ್ಲ ಗ್ರಾಮದಲ್ಲಿ ಅಲ್ಪ ಸಂಖ್ಯಾತರ ಮುರಾರ್ಜಿ ವಸತಿ ಶಾಲೆಯೊಂದನ್ನು ಮಂಜೂರಾತಿ ಪಡೆದು ತಂದಿದ್ದಿರಿ ಅದನ್ನು ಸ್ವಾಗತಿಸುತ್ತೇನೆ. ಅದರಂತೆ ಎಸ್ಸಿ ಎಸ್ಟಿ ಹಾಸ್ಟೇಲ್ ಕೇವಲ ಪ್ರಸ್ಥಾವನೆ ಸಲ್ಲಿದ್ದಿರಿ ಆದರೇ ನಾನು ಬಂದ ಮೇಲೆ ನಮ್ಮ ಸರಕಾರದ ಅವಧಿಯಲ್ಲಿ ವಿಶೇಷ 28 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರದ ಬಹುಮುಖ್ಯವಾದ ಯೋಜನೆ ಜಲಧಾರೆ ಯೋಜನೆಯಡಿಯಲ್ಲಿ ತಾಲೂಕಿನÀ ಜನರಿಗೆ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡಲು ಉದ್ದೇಶಿಸಿ ಸರಕಾರದ ಮಟ್ಟದಲ್ಲಿದೇ ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಟೆಂಡೆರ ಕರೆಯಲಾಗುವುದು.

ಮಾಜಿ ಸಚಿವÀ ಸಿ ಎಸ್ ನಾಡಗೌಡ ಅವರು ತಾಲೂಕಿನಲ್ಲಿ 800 ಮನೆಗಳನ್ನು ಮಂಜುರಾತಿಗೆ ಕಳಿಸಿದ್ದಿರಿ ಆದರೇ ಅರ್ಹ ಫಲಾನುಭವಿಸಿಗಳ ಆಯ್ಕೆ ಮಾಡದೇ ಇರುವದರಿಂದ. ಸಧ್ಯ ನಾನು ನಮ್ಮ ಅಧಿಕಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ 35, ಪಟ್ಟಣಗಳಿಗೆ 500, ತಾಳಿಕೋಟಿ, 500, ನಾಲತವಾಡ 150 ಮನೆಗಳನ್ನು ತಂದಿದ್ದೇನೆ ಅರ್ಹ ಫಲಾನುಭವಿಗಳಿಗೆ ಹಂಚಿಕೆಕೂಡ ಮಾಡಲಾಗುವುದು.

ಸಧ್ಯ ನನ್ನ ಅಭಿವೃದ್ಧಿಯಲ್ಲಿ ತಮ್ಮ ಅನುದಾನ ತಂದಿರುವ ಬಗ್ಗೆ ಸುಳು ಮಾಹಿತಿ ಇದೇ ಎಂದು ಹೇಳುವ ಮಾಜಿ ಸಚೀವ ಸಿ ಎಸ್ ನಾಡಗೌಡ ಅವರು ಸುಮ್ಮನೇ ಬಾಯಿ ಮಾತಿನಲ್ಲಿ ಹೇಳಿದೆ ಸಾಲದು ಅಧಿಕೃತ ದಾಖಲೆಗಳ ಸಮೇತ ಬಹಿರಂಗ ಚರ್ಚೇಗೆ ಮುಂದೆ ಬರಲಿ ಆಗ ಜನರೇ ತಿರ್ಮಾನಿಸುತ್ತಾರೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಟಾಂಗ್ ನೀಡಿದರು.

ಈ ವೇಳೆ ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸದಾಶಿವ ಮಾಗಿ, ಬಸವರಾಜ ಮೂರಾಳ, ಚನ್ನಪ್ಪ ಕಂಠಿ, ಬಸಪ್ಪ ತಟ್ಟಿ, ಅಶೋಕ ವನಹಳ್ಳಿ ಸೇರಿದಂತೆ ಹಲವರು ಇದ್ದರು.