ದುರಸ್ತಿಗೆ ಸಾರ್ವಜನಿಕರ ಆಗ್ರಹ

ಲಕ್ಷ್ಮೇಶ್ವರ,ಮೇ21: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದ ಹೊಸ ಬಸ್ ನಿಲ್ದಾಣ ಎದುರಿಗೆ ಅರೇಬರೇ ಕಾಮಗಾರಿಯಿಂದ ಹುಬ್ಬಳ್ಳಿ ಮತ್ತು ಹಾವೇರಿ ಬರುವ ಬಸ್ಸುಗಳಿಗೆ ಹಾಗೂ ಗ್ರಾಮಾಂತರ ಸಾರಿಗೆ ಬಸ್ಸುಗಳು ಹೊಸ ಬಸ್ ನಿಲ್ದಾಣ ಪ್ರವೇಶಿಸಲು ಇನ್ನಿಲ್ಲದ ಹರಸಹಾಸ ಪಡಬೇಕಾಗಿದೆ.
ಹೊಸ ಬಸ್ ನಿಲ್ದಾಣದ ರಸ್ತೆಯನ್ನು ಸಿ.ಸಿ ರಸ್ತೆಯನ್ನಾಗಿ ಮಾಡಲಾಗಿದೆ ಆದರೆ ಅದರ ಪಕ್ಕದ ರಸ್ತೆ ಈಗ ನಿರ್ಮಿಸಿದ ರಸ್ತೆಗಿತ್ತಲ್ಲೂ ಎತ್ತರವಾಗಿರುವುದರಿಂದ ನೇರವಾಗಿ ಬಸ್ ಒಳ ಬರಲು ಸಾಧ್ಯವಾಗುತ್ತಿಲ್ಲ ಆ ಕಾರಣಕ್ಕಾಗಿ ಬಸ್ ಚಾಲಕರು ಒಮ್ಮಿಂದೊಮ್ಮೇಲ್ಲೇ ರಸ್ತೆಯ ಬಲ ಭಾಗದಲ್ಲಿ ತಿರುವು ಪಡೆಯುವ ಸಾಹಸ ಮಾಡುವುತ್ತಿರುವುದರಿಂದ ಮತ್ತು ಎದುರಗಡೆ ವಾಹನ ಬಂದರೆ ಅಪಾಯ ತಪ್ಪಿದ್ದಲ್ಲ.
ಗುತ್ತಿಗೆದಾರರು ಮತ್ತೊಂದು ಭಾಗದ ರಸ್ತೆಯನ್ನು ದುರಸ್ತಿ ಮಾಡದಿದ್ದರೇ ಅಷ್ಟೇ ಎತ್ತರವಾಗಿರುವ ಪ್ರದೇಶಕ್ಕೆ ಮಣ್ಣನ್ನು ಹಾಕಿ ಬಸ್ಸುಗಳು ಸರಳವಾಗಿ ನಿಲ್ದಾಣ ಪ್ರವೇಶುವಂತೆ ಮಾಡಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಇದಕ್ಕೆ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖೆಯ ಇಂಜನಿಯರುಗಳು ಆಗಲಿ ಗುತ್ತಿಗೆದಾರರು ಆಗಲಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ದುರ್ದೈವದ ಸಂಗತಿಯಾಗಿದೆ ಆದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.